ಚಿಕ್ಕೋಡಿ

ಬೆಳಕೂಡ-ಜೈನಾಪೂರ ಗ್ರಾಮದಲ್ಲಿ ಗುಣಮಟ್ಟದ ಸಾಂಸ್ಕೃತಿ ಭವನ ನಿರ್ಮಾಣ: ಐಹೊಳೆ

ಬೆಳಕೂಡ-ಜೈನಾಪೂರ ಗ್ರಾಮದಲ್ಲಿ ಗುಣಮಟ್ಟದ ಸಾಂಸ್ಕೃತಿ ಭವನ ನಿರ್ಮಾಣ: ಐಹೊಳೆ

ಚಿಕ್ಕೋಡಿ 03: ತಾಲೂಕಿನ ಬೆಳಕೂಡ ಹಾಗೂ ಜೈನಾಪೂರ ಗ್ರಾಮದಲ್ಲಿ ಸಾಂಸ್ಕೃತಿ ಭವನ ನಿರ್ಮಾಣಕ್ಕೆ 40 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. 

ತಾಲೂಕಿನ ಬೆಳಕೂಡ ಮತ್ತು ಜೈನಾಪೂರ ಗ್ರಾಮದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.  

ಎರಡನೆ ಅಲೆ ಕಡಿಮೆಯಾಗಿದೆಂದು ಯಾರು ಮೈಮರೆಯುವಂತಿಲ್ಲ, ಮೂರನೆ ಅಲೆಗೆ ಆಸ್ಪದ ಕೊಡದೇ ಜೀವ ರಕ್ಷಣೆ ಮಾಡಿಕೊಳ್ಳಲು ಎಲ್ಲರೂ ಜಾಗೃತರಾಗಬೇಕು. ಕೊರೊನಾದ ಲಕ್ಷಣಗಳಾದ ಜ್ವರ, ನೆಗಡಿ ಮತ್ತು ಕೆಮ್ಮು ಇದ್ದರೇ ತಕ್ಷಣಾ ನಮಗೆ ಸಂಪರ್ಕಿಸಿದರೇ ಓಷಧಿಗಳನ್ನು ಮುಟ್ಟಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು. 

ಕೊರೊನಾ ಲಾಕಡೌನ ಅವಧಿಯಲ್ಲಿ ಅಭಿವೃದ್ಧಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಜನರ ಬೇಡಿಕೆಗೆ ಸ್ಪಂಧಿಸುವ ಕೆಲಸ ಮಾಡುತ್ತೇನೆ. ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತೇನೆ. ಕೊರೊನಾ ಸೋಂಕಿಗೆ ಹೆದರದೇ ದೈರ್ಯವಾಗಿರಬೇಕು ಎಂದರು. 

ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ರಾಯಬಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಹಳ್ಳಿಗಳಲ್ಲಿ ಕೋವಿಡ್ ತಡೆಯಯವಲ್ಲಿ ಶಾಸಕರ ಪ್ರಯತ್ನ ಸಾಕಷ್ಟು ಇದೆ. ಅಭಿವೃದ್ಧಿಯಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ಎಂದರು. 

ಬೆಳಕೂಡ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಕುಂಬಾರ, ಕರೋಶಿ ಗ್ರಾಪಂ ಅಧ್ಯಕ್ಷ ಸಾವಿತ್ರಿ ಜೆಧೆ, ಧಾರ್ಮಿಕ ದತ್ತಿ ಇಲಾಖೆ ಜಿಲ್ಲಾ ಸದಸ್ಯ ವಿಠ್ಠಲ ಮಾಳಿ, ದೇವರಾಜ ಪಾಶ್ಚಾಪೂರೆ, ಮಲ್ಲಿಕಾರ್ಜುನ ಬಿಡ್, ಕಲ್ಲಪ್ಪ ಮೋರೆ, ಎಪಿಎಂಸಿ ಉಪಾಧ್ಯಕ್ಷ ಈರಗೌಡ ಕೆಳಗಿನಮನಿ, ನ್ಯಾಯವಾದಿ ರವಿ ಹಿರೇಕೊಡಿ, ವಿಜಯ ಕೊಠಿವಾಲೆ, ಬಸವರಾಜ ಮಾಳಗೆ, ಮಲ್ಲಪ್ಪ ಅರಭಾವಿ, ಮಹಾಂತೇಶ ಯಶವಂತ, ಇಂಜನಿಯರ ಎಸ್‌.ಎಸ್‌.ಹೊಸಮನಿ. ಶಿಕ್ಷಕ ಚಂದ್ರಶೇಖರ ಅರಬಾವಿ ಮುಂತಾದವರು ಇದ್ದರು. 


ಸುದ್ದಿ ಓದಿ