ರಾಣೆಬೆನ್ನೂರ

ಗಂಗಾಧರ 36 ಅಡಿ ಮಹಾಮೂರ್ತಿ ನಿರ್ಮಾಣ ಶಂಕುಸ್ಥಾಪನೆ

ಗಂಗಾಧರ 36 ಅಡಿ ಮಹಾಮೂರ್ತಿ ನಿರ್ಮಾಣ ಶಂಕುಸ್ಥಾಪನೆ

ರಾಣೇಬೆನ್ನೂರು  20:  ತಾಲೂಕಿನ ಸಮೀಪದ, ಕೋಡಿಯಾಲ ಹೊಸಪೇಟೆ ಗ್ರಾಮದ, ಅವಿಮುಕ್ತ ತಪೋ ಕ್ಷೇತ್ರ ಪುಣ್ಯಕೋಟಿ ಮಠದಲ್ಲಿ, ಸದ್ಭಕ್ತರ ಇಚ್ಛೆಯಂತೆ ಅಕ್ಟೋಬರ್ 24,2024 ರಂದು ಗುರುವಾರ ಮುಕ್ತಿಮಂದಿರದ ಮಹರ್ಷಿ ಲಿಂಗೈಕ್ಯ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರ 36 ಅಡಿ ಎತ್ತರದ ಸಿಮೆಂಟ್ ಮಹಾಮೂರ್ತಿ ನಿರ್ಮಾಣ ಕಾಮಗಾರಿ ಶಂಕುಸ್ಥಾಪನಾ ಸಮಾರಂಭವು ನಡೆಯಲಿದೆ ಎಂದು ಬಾಲ ಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿಯವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ, ಶ್ರೀ  ಗಳು ತುಂಗಭದ್ರಾ ನದಿ ತೀರದಲ್ಲಿರುವ ಈ ಪಾವನ ಪುಣ್ಯ ಕ್ಷೇತ್ರವು ಪ್ರತಿ ಹಂತದಲ್ಲಿಯೂ ಭಕ್ತರ ಸದೀಚ್ಛಯಂತೆ  ಅಭಿವೃದ್ಧಿ ಕಾಣುತ್ತಲಿದೆ.       ಸಂಕಲ್ಪ ಇಚ್ಛೆಯಂತೆ ನೂತನ ತಪೋಮಂದಿರದ ಮೇಲ್ಭಾಗದಲ್ಲಿ 1,ಕೋಟಿ 13, ಲಕ್ಷ ರೂಗಳ ವೆಚ್ಚದಲ್ಲಿ  ಮುಕ್ತಿ ಮಂದಿರದ  ಲಿಂಗೈಕ್ಯ ಶ್ರೀ ವೀರಗಂಗಾಧರ ಭಗವತ್ಪಾದರ ಮಹಾಮೂರ್ತಿ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಅಂದು ಮುಂಜಾನೆ ಅಮೃತಸಿದ್ಧಿಯೋಗದ 8-10 ಗಂಟೆಗೆ  ಶಾಸ್ತ್ರೋಕ್ತವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಎಲ್ಲಾ ಗುರುಗಳು, ಜಂಗಮಪುರೋಹಿತರ ನೇತೃತ್ವದಲ್ಲಿ ನಡೆಯಲಿದೆ ಎಂದರು.      

ಧರ್ಮಸಭೆ :- ಅಂದು ಮುಂಜಾನೆ 10:30 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಮಲ ರೇಣುಕ ವೀರ ಮುಕ್ತಿಮನಿ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸುವರು. ನೆಗಳೂರು ಶ್ರೀ ಗುರು ಶಾಂತಲಿಂಗ ಶಿವಾಚಾರ್ಯರು, ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಮಂಜುನಾಥ ಶಿವಮೊಗ್ಗ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ್ ಕೋಳಿವಾಡ ಅವರು ತಡೆಗೋಡೆ ನಿರ್ಮಾಣದ ಅಡಿಗಲ್ಲು ಪೂಜೆ ನೆರವೇರಿಸುವರು.        

ಹರಿಹರ ಶಾಸಕ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಅವರು ಶ್ರೀ ವೀರ ಗಂಗಾಧರ ಜಗದ್ಗುರುಗಳ ಮೂರ್ತಿಗೆ ಪುಷ್ಪಾರ್ಪಣೆ ಸಮರ್ಪಿಸುವರು. ಮಾಜಿ ಸಂಸದ ಕೆ.ಎಸ್‌. ಈಶ್ವರಪ್ಪ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ, ಮೈಸೂರು ಕವಿವಿ  ಕುಲಪತಿ ಡಾ.ಶರಣಬಸಪ್ಪ ಹಲಸೆ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸೋಮಣ್ಣ ಬೇವಿನಮರದ, ಎಸ್ ಎಸ್ ಕೆ ಸಮಾಜದ ರಾಜ್ಯಾಧ್ಯಕ್ಷ ಡಾ, ಶಶಿಕುಮಾರ್ ಮೇಹರವಾಡೆ, ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಮೈಸೂರು ಕ. ರಾ. ಮುಕ್ತ ವಿ. ವಿ. ಪರೀಕ್ಷಾಂಗ ಕುಲ ಸಚಿವ, ಡಾ. ಎಚ್‌. ವಿಶ್ವನಾಥ ಅವರ ಅಭಿನಂದನ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಚ್‌.ಎಸ್‌. ಶಿವಶಂಕರ್, ಅರುಣಕುಮಾರ್ ಪೂಜಾರ, ಆರ್‌.ಶಂಕರ್, ಎಸ್‌. ರಾಮಪ್ಪ, ಹೆಚ್‌.ಎಂ.ರೇಣುಕ ಪ್ರಸನ್ನ, ಕೆ.ಇ.ಕಾಂತೇಶ್, ಬಿ.ಜೆ ಅಜಯ್ ಕುಮಾರ್, ಮಂಜುನಾಥ ಗೌಡಶಿವಣ್ಣನವರ್, ಚಿದಾನಂದಪ್ಪ, ಸುರೇಶ ಸಣ್ಣವೀರ​‍್ಪನವರ್, ಮಹಂತೇಶ ಶಾಸ್ತ್ರಿಗಳು, ದೇವರ ಮನೆ ಶಾಂತಕುಮಾರ್ ಸೇರಿದಂತೆ ಮತ್ತಿತರ ಗಣ್ಯರು ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಪಾಲ್ಗೊಳ್ಳುವರು ಎಂದರು. 


ಸುದ್ದಿ ಓದಿ