ಸಂವಿಧಾನವು ದೇಶದ ಧರ್ಮ ಗ್ರಂಥ: ಹೆಗಡೆ
ಮುದ್ದೇಬಿಹಾಳ: ಸಂವಿಧಾನವು ದೇಶದ ಧರ್ಮ ಗ್ರಂಥ ಎಂದು ಪ್ರೌಢ ಶಾಲಾ ಮುಖ್ಯಸ್ಥರು ರಾಮಚಂದ್ರ ಹೆಗಡೆ ಹೇಳಿದರು. ಪಟ್ಟಣದ ಜ್ಞಾನ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ಭಾರತ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರವರ ಭಾವಚಿತ್ರಕ್ಕೆ ಪೂಜೆ ನೆರವೇರಸಿ ಮಾತನಾಡುತ್ತಾ ನಮ್ಮ ಭಾರತದಲ್ಲಿ ಪ್ರಜಾ ಪ್ರಭುತ್ವ ಯಶಸ್ವಿಯಲ್ಲಿ ಸಂವಿಧಾನ ಬಹಳ ಮುಖ್ಯವಾಗಿದೆ. ಪ್ರತಿಯೊಬ್ಬ ನಾಗರಿಕನು ಸಂವಿಧಾನವನ್ನು ತಿಳಿದುಕೊಳ್ಳಲೆ ಬೇಕಾಗಿದೆ. ಸಂವಿಧಾನದ ಹಿಂದೆ ರಚನಾಕಾರರ ಪರಿಶ್ರಮ ಅಡಗಿದೆ. ಇವತ್ತಿನ ದಿವಸ ನಾವು ಸ್ಮರಿಸಿಕೊಳ್ಳಬೇಕಾಗಿದೆ.
ಅದರಂತೆ ನಡೆದುಕೊಳ್ಳಬೇಕಾಗಿದೆಯೆಂದು ಹೇಳಿದರು. ಪ್ರಾಥಮಿಕ ವಿಭಾಗದ ಮುಖ್ಯಗುರು ಜಿ.ಜೆ.ಪಾಗಟ್ಟಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಬೋಧಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಲೀಲಾ ಭಟ್ಟ, ಆಡಳಿತಾಧಿಕಾರಿ ಶಾಂತಾ ಭಟ್ಟ, ಪ್ರಾಚಾರ್ಯ ಅರುಣ ಹುನಗುಂದ, ಆಂಗ್ಲ ಮಾಧ್ಯಮ ಮುಖ್ಯಗುರು ಮಾತೆ ರಂಜಿತಾ ಹೆಗಡೆ, ಶಿಕ್ಷಕಿ ಇಂದು ನಾಯಕ ಸೇರಿದಂತೆ ಇತರರು ಹಾಜರಿದ್ದರು. ಪೋಟೊ: ಮುದ್ದೇಬಿಹಾಳ ಪಟ್ಟಣದ ಜ್ಞಾನ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾರತ ಸಂವಿಧಾನ ದಿನ ಆಚರಿಸಲಾಯಿತು.ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ತರು ಹಾಗೂ ಸಿಬ್ಬಂದಿಗಳು ಸಂವಿದಾನ ದಿನಾಚರಣೆ ಆಚರಿಸಿದರು.ಹುಡ್ಕೋ ಬಡಾವಣೆಯಲ್ಲಿರುವ ಮಿನಿ ವಿಧಾನಸೌಧ ದಲ್ಲಿ ತಹಶಿಲ್ದಾರ ಬಲರಾಮ ಕಟ್ಟಿಮನಿ ನೇತೃತ್ವದಲ್ಲಿ ಸಂವಿದಾನದ ಪೀಠಿಕೆ ಓದಿ ಪ್ರತಿಜ್ಞಾ ಬೋದನೆ ಮಾಡುವ ಮೂಲಕ ಸಂವಿದಾನ ದಿನಾಚರಣೆ ಆಚರಿಸಲಾಯಿತು.