ಆರ್ಟಿಇಎಸ್. ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ
ಲೋಕದರ್ಶನ ವರದಿ
ರಾಣೇಬೆನ್ನೂರು 27: ಡಾ.ಬಿ.ಆರ್ ಅಂಬೇಡ್ಕರ್ ಅವರ ದೂರ ದೃಷ್ಟಿ ಮತ್ತು ಸತತ ಪರಿಶ್ರಮದಿಂದ ಭಾರತದ ಸಂವಿದಾನವು ಅತ್ಯಂತ ಪ್ರಭುದ್ದ ಮತ್ತು ಮೌಲ್ಯಯುತವಾಗಿ ರಚನೆಯಾಗಿದೆ. ನಮ್ಮ ಸಂವಿಧಾನವು ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತಲೂ ವಿಶೇಷತೆಯಿಂದ ಕೊಡಿದೆ. ಸಂವಿದಾನದ ಮೂಲ ಆಶಯವನ್ನು ತಿಳಿದುಕೂಂಡು ಗೌರವ ಕೊಡಬೇಕು ಎಂದು ಆರ್.ಟಿ.ಇ.ಎಸ್ ಕಾನೂನು ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಬಿ.ಆರ್ ರುದ್ರೇಶ ಹೇಳಿದರು.
ಅವರು ಶುಕ್ರವಾರ ಕಾಲೇಜಿನ ಸಾವುಕಾರ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಯಾಗಿ ಪಾಲ್ಗೂಂಡು ಉಪನ್ಯಾಸ ನೀಡಿದರು. ಭಾರತೀಯರು ವಿವಿಧತೆಯಲ್ಲಿ ಏಕತೆಯಿಂದ ಬದುಕನ್ನು ಸಾಗಿಸುತ್ತಿದ್ದಾರೆ, ಪ್ರೀತಿ, ವಿಶ್ವಾಸ, ಗೌರವ, ಸಂಪ್ರದಾಯ ನೆಲ ಮೂಲದಿಂದಲೇ ನಡೆದು ಬಂದಿದೆ. ಅದೇ ರೀತಿ ಸಂವಿಧಾನದ ಗ್ರಂಥವು ಸಹ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ದೂರಕಿಸುವ ಮಹತ್ವ ಪೂರ್ಣ ಉದ್ದೇಶ ಹೂಂದಿದೆ ಎಂದ ಅವರು ಪ್ರತಿಯೊಬ್ಬ ನಾಗರೀಕರು ಭಾವೈಕ್ಯತೆಯಿಂದ ಬದುಕಿ, ಬಾಳಿ ಸಮಗ್ರ ಅಭಿವೃದ್ದಿಗೆ ಶ್ರಮಿಸಬೇಕಾದ ಇಂದಿನ ಅಗತ್ಯವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸುಭಾಷ ಸಾವುಕಾರ ಅವರು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು. ಪ್ರಾಚಾರ್ಯ ಎಫ್.ಹೆಚ್. ಮಾಚೇನಹಳ್ಳಿ, ಆರ್, ಮಧುಕುಮಾರ, ಸ್ವಪ್ನಾ ಡಿ. ಮುದುಗಲ್, ಡಾ.ಸರಸ್ವತಿ ಹೆಚ್. ಬಮ್ಮನಾಳ, ಸೇರಿದಂತೆ ಮತ್ತಿತರೆ ಗಣ್ಯರು ಉಪನ್ಯಾಸಕರು ಉಪಸ್ಥಿತರಿದ್ದರು.