ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶ್ರೀಮಂತ ಪಾಟೀಲ
ಲೋಕದರ್ಶನ ವರದಿ
ಅಥಣಿ 01: ಕಾಗವಾಡ ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದೆ ಹೊರತು ರಾಜ್ಯ ಸಚಿವ ಸಂಪುಟದಲ್ಲಿ ಸೇರೆ್ಡಯಾಗುವುದಲ್ಲ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಅವರು ಪಾರ್ಥನಹಳ್ಳಿ ಗ್ರಾಮದಲ್ಲಿ 140 ಲಕ್ಷ ರೂ.ಗಳ ಹಳೆ ಕಿರಣಗಿ ಹಾಗೂ ಜಾಧವ ತೋಟದ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಗಡಿ ಭಾಗದ ಕಾಗವಾಡ ಮತಕೇತ್ರವನನು ಇಡಿ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ನನ್ನದಾಗಿದೆ. ಇದಕ್ಕಾಗಿ ಶಿಕ್ಷಣ ವ್ಯವಸ್ಥೆ ಸರಿಯಾಗಿರಬೇಕು ಎನ್ನುವ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚು ಕೊಡುತ್ತಿರುವೆ ಎಂದರು. ಶಿಕ್ಷಣದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಲು ಸಾಧ್ಯ ಮತ್ತು ಶಿಕ್ಷಣದಿಂದಲೇ ಸಧೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದ ಅವರು ನಾಬಾರ್ಡ ಯೋಜನೆಯಡಿ ಕಾಗವಾಡ ಮತಕೇತ್ರದ ಸರಕಾರಿ ಶಾಲೆಗಳಲ್ಲಿ ಕೊರತೆ ಇದ್ದ 300 ಕ್ಕೂ ಹೆಚ್ಚು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ತಂದಿರುವೆ ಎಂದರು.
ಗ್ರಾಮೀಣ ಮಕ್ಕಳ ಆರೋಗ್ಯ ಸರಿಯಾಗಿರಬೇಕು ಎನ್ನುವ ಉದ್ದೇಶದಿಂದ 100 ಸರಕಾರಿ ಶಾಲೆಗಳಿಗೆ 100 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿರುವೆ ಇನ್ನೂ ಅನೇಕ ಶಾಲೆಗಳಿಗೆ ನೀರಿನ ಘಟಕದದ ಅವಶ್ಯಕತೆ ಇದ್ದು, ಮುಂದಿನ ಕೆಲವೇ ತಿಂಗಳಲ್ಲಿ ಅಲ್ಲಿಯೂ ಸಹ ನೀರಿನ ಘಟಕಗಳನ್ನು ಅಳವಡಿಸುವೆ ಎಂದ ಅವರು ದಸರಾ, ದೀಪಾವಳಿ ರಜೆಯ ನಂತರ ಸ್ಮಾರ್ಟ ಮತ್ತು ಡಿಜಿಟಲ್ ಕ್ಲಾಸ್ ಯೋಜನೆಗೆ ಚಾಲನೆ ನೀಡುವೆ ಎಂದರು.
ಕಳೆದ ಅನೇಕ ವರ್ಷಗಳಿಂದ ಈ ಭಾಗದ ಗ್ರಾಮಸ್ಥರ ಬೇಡಿಕ ಮನ್ನಿಸಿ 120 ಲಕ್ಷ ರೂ.ಅನುದಾನದಲ್ಲಿ ಹಳೆ ಕಿರಣಗಿ ರಸ್ತೆ ಹಾಗೂ 20 ಲಕ್ಷ ವೆಚ್ಚದ ಅನುದಾನದಲ್ಲಿ ಜಾಧವ ತೋಟದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿರುವೆ ಎಂದ ಅವರು ನನ್ನ ಅಧಿಕಾರವಧಿಯಲ್ಲಿ ಕಾಗವಾಡ ಮತಕ್ಷೇತ್ರದ ಎಲ್ಲ ತೋಟದ ರಸ್ತೆಗಳಿಗೆ ಅಷ್ಟೇ ಅಲ್ಲ ಗ್ರಾಮ, ಗ್ರಾಮಗಳ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನೂ ಸಹ ಮೇಲ್ದರ್ಜೆಗೆರಿಸುವ ಕಾರ್ಯಕ್ಕೆ ಚಾಲನೆ ನೀಡಿರುವೆ ಎಂದರು.
ಪಂಚಾಯತ ರಾಜ ಇಲಾಖೆಯ ವೀರಣ್ಣಾ ವಾಲಿ, ಎಸ್.ಎ.ಸಾಂವಗಾಂವ, ಧುರೀಣರಾದ ಭಾವುಸಾಹೇಬ ಜಾಧವ, ಅರ್ಜುನ ನಾಯಿಕ, ನಾನಾಸಾಹೇಬ ಅವತಾಡೆ, ಶಿವಾನಂದ ಗೊಲಭಾವಿ, ಸಿದರಾಯ ತೇಲಿ, ದಾದಾ ಪಾಟೀಲ, ಅಪ್ಪಣ್ಣ ಮುಜಣ್ಣವರ, ಶಿವಾನಂದ ಮುಜಣ್ಣವರ, ರಾಮಜಿ ಚವ್ಹಾಣ ಮಹಾದೇವ ಜಾಧವ, ಬಾಳಕೃಷ್ಣ ಚವ್ಹಾಣ, ಬಿ.ಕೆ.ಚನ್ನರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.