ಮಂದಿರ ಮೇಲೆ ದಾಳಿಗೆ ಸಂಚು, ದೆಹಲಿಯಲ್ಲಿ ಹೈಆಲರ್ಟ್ ಘೋಷಣೆ
ನವದೆಹಲಿ, ಆ ಆಗುಸ್ಟ್ 22: ದೆಹಲಿ ಪೊಲೀಸರು ಗುಂಡಿನ ಚಕಮಕಿಯೊಂದಿಗೆ ಬಂಧಿಸಲಾದ ಐಸಿಸ್ ಭಯೋತ್ಪಾದಕನಿಂದ 15 ಕೆ.ಜಿ ಸ್ಪೋಟಕ ಮತ್ತು ಒಂದು ಪಿಸ್ತೂಲ್ ವಶ ಪಡಿಸಿಕೊಳ್ಳಲಾಗಿದೆ. ಅಫ್ಘಾನಿಸ್ತಾನದಲ್ಲಿರುವ ತನ್ನ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಉಗ್ರನನ್ನುಅಬು ಯೂಸುಫ್ ಖಾನ್ ಎಂದು ಗುರುತಿಸಲಾಗಿದ್ದು, ರಾಮ ಮಂದಿರದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎನ್ನುವ ಆತಂಕಕಾರಿ ಅಂಶ ಸದ್ಯ ಬೆಳಕಿಗೆ ಬಂದಿದೆ. ಪೊಲೀಸರು ನಡುವೆ ಗುಂಡಿನ ಚಕಮಕಿ ನಡೆಸಿದ ಉಗ್ರರನ್ನ ಬಂಧಿಸಲಾಗಿದೆ. ಅವರು ಒಂಟಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡಮಟ್ಟದ ದಾಳಿ ನಡೆಸಲು ಯೋಜಿಸಿದ್ದ. ಅವನಿಂದ ಪಿಸ್ತೂಲ್ ಮತ್ತು ಎರಡು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಉಗ್ರರು ಆಡಗಿಕೊಂಡಿರುವ ಶಂಕೆ ಇದ್ದು, ದೆಹಲಿಯಾದ್ಯಾಂತ ಹೈ ಆಲರ್ಟ್ ಘೋಷಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪ್ರಮೋದ್ ಕುಸ್ವಾಹ ಹೇಳಿದ್ದಾರೆ.