ತೀರ್ಪು ರಾಜ್ಯಾಂಗ ಸ್ಫೂರ್ತಿಗೆ ವಿರುದ್ಧ; ಕಾಂಗ್ರೆಸ್
ನವದೆಹಲಿ, ಸೆಪ್ಟೆಂಬರ್ 30: ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಭಾರತ ಸಂವಿಧಾನದ ಸ್ಪೂರ್ತಿಗೆ ವಿರುದ್ಧವಾದದ್ದು ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಬಾಬ್ರಿ ಮಸೀದಿ ದ್ವಂಸಗೊಳಿಸಿದ ಕೃತ್ಯ ಸಂಪೂರ್ಣ ಕಾನೂನಿಗೆ ವಿರುದ್ದ ಕೃತ್ಯವೆಂದು, ನ್ಯಾಯ ವ್ಯವಸ್ಥೆ ಅಸಾಧಾರಣ ರೀತಿಯಲ್ಲಿ ಉಲ್ಲಂಘನೆಗೆ ಗುರಿಯಾಗಿದೆ ಎಂದು 2019ರ ನವಂಬರ್ 9 ರ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ನೀಡಿದ ತೀರ್ಪಿಗೂ, ಪ್ರಸ್ತುತ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಪರಸ್ಪರ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ವ್ಯಾಖ್ಯಾನಿಸಿದೆ.
ಈ ಸಂಬಂಧ ಕಾಂಗ್ರೆಸ್ ಅಧಿಕೃತ ವಕ್ತಾರ ರಣದೀಪ್ ಸುರ್ಜೆವಾಲ ಪಕ್ಷದ ಪರವಾಗಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಾಬ್ರಿ ಮಸೀದಿ ದ್ವಂಸಗೊಳಿಸಲು ಆ ದಿನಗಳಲ್ಲಿ ಬಿಜೆಪಿ - ಆರ್ ಎಸ್ ಎಸ್ ರೂಪಿಸಿದ್ದ ಸಂಚಿಗೆ ಇಡೀ ದೇಶ ಸಾಕ್ಷ್ಯವಾಗಿ ನಿಂತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದಿನ ಸಂಚಿನಲ್ಲಿ ಅಂದಿನ ಉತ್ತರ ಪ್ರದೇಶ ಸರ್ಕಾರ ಕೂಡಾ ಭಾಗಿಯಾಗಿತ್ತು ಎಂದು ಆರೋಪಿಸಿದ್ದಾರೆ. ದೇಶದಲ್ಲಿರುವ ಮತ ಸಾಮರಸ್ಯ, ಸಹೋದರತ್ವಕ್ಕೆ ಇಂದಿನ ಘಟನೆ ಆಘಾತ ಕಲ್ಪಿಸಿದೆ ಎಂದು ಟೀಕಿಸಿದೆ.
ಮತ್ತೊಂದು ಕಡೆ ಭಾರತ ಸಂವಿಧಾನದ ಮೇಲೆ, ದೇಶ ಮತಸಾಮರಸ್ಯದ ಸ್ಪೂರ್ತಿಯ ಮೇಲೆ, ಭ್ರಾತೃತ್ವದ ಮೇಲೆ ವಿಶ್ವಾಸ ಹೊಂದಿರುವ ಪ್ರತಿಯೊಬ್ಬ ದೇಶದ ನಾಗರೀಕ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಬೇಕು. ಈ ತೀರ್ಪಿನ ವಿರುದ್ದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದು ಕೇಂದ್ರ, ಉತ್ತರ ಪ್ರದೇಶ ಸರ್ಕಾರಗಳನ್ನು ಒತ್ತಾಯಿಸಬೇಕು ಎಂದು ಕಾಂಗ್ರೆಸ್ ಪಕ್ಷ ಕರೆ ನೀಡಿದೆ.