ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕೋಡಿ 11: ರಾಜ್ಯಾಧ್ಯಂತ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಸಕರ್ಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಹೀಗಾಗಿ ಚಿಕ್ಕೋಡಿ ನಗರದಲ್ಲಿಯೂ ಕಾಂಗ್ರೆಸ್ ವಿವಿಧ ಘಟಕದ ಕಾರ್ಯಕರ್ತರು ಪೆಟ್ರೋಲ್ ಬಂಕ್ ಎದುರುಗಡೆ ಪ್ರತಿಭಟನೆ ನಡೆಸಿ ಕೇಂದ್ರ ಸಕರ್ಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯಾಧ್ಯಂತ ಇಂದಿನಿಂದ ಐದು ದಿನಗಳ ಕಾಲ ನಾಟೌಟ್-100 ಜನಾಂದೋಲನ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷವು ಪೆಟ್ರೋಲ್ ಬಂಕ್ಗಳ ಮುಂದೆ ಪ್ರತಿಭಟನೆ ನಡೆಸಿದೆ. ಶುಕ್ರವಾರ ಚಿಕ್ಕೋಡಿ ನಗರದಲ್ಲಿ ಇರುವ ಬಸವ ಸರ್ಕಲ್ ಪೆಟ್ರೋಲ್ ಪಂಪ್ ಮುಂದೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸಕರ್ಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಡಿ.ನಾಯಿಕವಾಡಿ ಮಾತನಾಡಿ, ಕೇಂದ್ರದಲ್ಲಿ ಮೋದಿ ಸಕರ್ಾರ ಆಡಳಿತಕ್ಕೆ ಬಂದ ದಿನದಿಂದಲೂ ನಿರಂತರವಾಗಿ ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಳ ಮಾಡಿದೆ. ಇದರಿಂದ ದೇಶದ ಜನ ಬೇಸತ್ತು ಹೋಗಿದ್ದಾರೆ. ಕೊರೊನಾ ಲಾಕಡೌನ್ ಸಮಯದಲ್ಲಿ ಜನರು ಬದುಕುವುದೇ ದುಸ್ಥರವಾಗಿ ಬಿಟ್ಟಿದೆ. ಇಂತಹ ಜನವಿರೋಧಿ ಸಕರ್ಾರವನ್ನು ಕಿತ್ತೊಗೆಯಲು ಜನರು ಮುಂದಾಗಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಹಾವೀರ ಮೋಹಿತೆ, ಗಜಾನನ ಮಂಗಸುಳೆ, ಕೆಪಿಸಿಸಿ ರೈತ ಮೋಚರ್ಾ ರಾಜ್ಯ ಉಪಾಧ್ಯಕ್ಷ ದಸ್ತಗೀರ ಕಾಗವಾಡೆ, ಅಸ್ಲಮ ನಾಲಬಂದ್, ಮಹಾದೇವ ಕವಲಾಪೂರೆ, ಯಲ್ಲಪ್ಪ ಶಿಂಗೆ, ಶಂಕರಗೌಡ ಪಾಟೀಲ, ಓಂಪ್ರಕಾಶ ಪಾಟೀಲ, ವಿಜಯ ಅಕ್ಕಿವಾಟೆ, ಶ್ರೀಕಾಂತ ಪೂಜಾರಿ ಮುಂತಾದವರು ಇದ್ದರು