ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದೇ ಕಾಂಗ್ರೆಸ್ ಪಕ್ಷ
ಶಿಗ್ಗಾವಿ: ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವುದೇ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬರು ಪಕ್ಷಕ್ಕಾಗಿ ದುಡಿಯಬೇಕು ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ ಹೇಳಿದರು. ಪಟ್ಟಣದ ಸವಣೂರ ರಸ್ತೆಯಲ್ಲಿರುವ ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಇಂದು 74ನೇ ಗಣರಾಜ್ಯೋತ್ಸವವನ್ನು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹಾಗೂ ಹೆಚ್ಚು ಬಹು ಗಾತ್ರ ಹೊಂದಿರುವ ಸಂವಿಧಾನ ಅದು ಭಾರತ ದೇಶದ ಸಂವಿಧಾನ ಎಂದರು.
ಸಮಾಜ ಸೇವಕ ಹಾಗೂ ತಾಲೂಕ ವಕ್ತಾರ ಮಂಜುನಾಥ್ ಮಣ್ಣಣ್ಣವರ ಮಾತನಾಡಿ ಭಾರತ ಸರ್ವಧರ್ಮ ಜಾತಿಗಳ ಸಾಮರಸ್ಯದ ಬಿಡು ಇಲ್ಲಿ ಎಲ್ಲರಿಗೂ ವಾಸಿಸುವ ಹಾಗೂ ಪರಸ್ಪರ ಸಾಮರಸ್ಯದಿಂದ ಬದುಕುವ ಹಕ್ಕು ಇದೆ. ಸಂವಿಧಾನದ ಅಡಿಯಲ್ಲಿ ರಾಷ್ಟ್ರಧ್ವಜ ಹಾಗೂ ಲಾಂಛನಕ್ಕೆ ಪ್ರತಿಯೊಬ್ಬರು ಎದ್ದುನಿಂತು ಕೈಮುಗಿದು ಗೌರವ ಸಲ್ಲಿಸಬೇಕು ಆದರೆ ಇತ್ತೀಚಿನ ಹಲವು ವರ್ಷಗಳಲ್ಲಿ ಅಧಿಕಾರದ ಹಾಸಿಗೆ ಲಾಂಛನ ಮತ್ತು ಧ್ವಜವನ್ನು ಸಹ ಬದಲಾಯಿಸುವ ಹುನ್ನಾರ ನಡೆದಿದ್ದು ದೇಶದ ಶಕ್ತಿಯಾಗಿರುವ ಯುವಕರು ಎಚ್ಚೆತ್ತುಕೊಳ್ಳಬೇಕು ಯುವ ಜನತೆಗೆ ಸರ್ವಧರ್ಮ ಜಾತಿ ಸಂಗಮದ ದೇಶದ ಐಕ್ಯತೆಗಾಗಿ ಸಾಮರಸ್ಯ ಕಾಯ್ದುಕೊಂಡು ಹೋಗೋ ಜವಾಬ್ದಾರಿ ಎಲ್ಲರದ್ದೂ ಆಗಿದೆ ದೇಶದ ಶಕ್ತಿ ಯುವಶಕ್ತಿ ಸಾಮರಸ್ಯಕ್ಕಾಗಿ ಎಚ್ಚೆತ್ತುಕೊಳ್ಳುವಂತೆ ದೇಶದ ಯುವಶಕ್ತಿಗೆ ಮನವಿ ಮಾಡಿಕೊಂಡರು.
ಶಿಗ್ಗಾವಿ ಶಹರ ಘಟಕದ ಅಧ್ಯಕ್ಷ ಚಂದ್ರು ಕೊಡ್ಲಿವಾಡ್ ಮಾತನಾಡಿದರು ಎಸ್ ಟಿ ಘಟಕದ ಅಧ್ಯಕ್ಷ ಪರಮೇಶ್ ಹರಿಜನ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಬರ್ ಬಾವಾಜಿ, ಬಂಕಾಪುರ ಘಟಕದ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ, ಮಾಜಿ ಪುರಸಭಾ ಸದಸ್ಯ ಬಶೀರ್ ಖಾನ್ ಎಳ್ಳೂರ, ಬೀರ್ಪ ಕುರುಬರ, ಮುಖಂಡ ಅತ್ತಾವುಲ್ಲಾಖಾನ್ ಮತ್ತು ಕಿರಣ ಹಲವರು ಉಪಸ್ಥಿತರಿದ್ದರು.