ಕಾಂಗ್ರೆಸ್ ಪಕ್ಷದ ಪ್ರಜಾದೋಣಿ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 15: ಮಾಜಿ ಸಚಿವೆ ಉಮಾಶ್ರೀ ಅವರು ಕಾಂಗ್ರೆಸ್ ಪಕ್ಷದ ಪ್ರಜಾದೋಣಿ ಕಾರ್ಯಕ್ರಮದ ನಿಮಿತ್ಯ ಜಿಲ್ಲೆಯ ಬ್ಯಾಡಗಿ ಮತಕ್ಷೇತ್ರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಶಿಗ್ಗಾವಿ ಶಾಲಿಮಾರ್ ಹೋಟೆಲ್ಗೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಿನ ಪಕ್ಷದ ಪದಾಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.
ತಾಲೂಕ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಬಾಬರ್ ಬಾವಾಜಿ, ತಾಲೂಕ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಜೊತೆ ಚರ್ಚೆಸಿ ಸಂಘಟನೆ ಮತ್ತು ಪಕ್ಷ ಘೋಷಿಸುವ ಅಧಿಕೃತ ಅಭ್ಯರ್ಥಿಯ ಜಯಕ್ಕಾಗಿ ಒಟ್ಟಾಗಿ ಶ್ರಮಿಸುವಂತೆ ಸೂಚಿಸಿದರು. ಹಿರಿಯ ಮುಖಂಡ ನಜೀರ್ ಸಾಬ್ ಕಬನೂರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸದ್ದಾಂ ದಿವಾನವರ್, ಖಾದರ್ಸಾಬ್ ನದಾಫ್, ಮೋದಿನಸಾಬ್ ದಿವಾನ್ನವರ, ರಫೀಕ್ ಶರಾವರಿ, ಮಲ್ಲಿಕ ಮೊಗಲಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.