ಸೌಂದತ್ತಿ

ಇನಾಂಹೊಂಗಲ ಗ್ರಾಮದಿಂದ ಯರಗಟ್ಟಿಯವರೆಗೆ ಕಾಂಗ್ರೆಸ್ ಪಾದಯಾತ್ರೆ

ಇನಾಂಹೊಂಗಲ ಗ್ರಾಮದಿಂದ ಯರಗಟ್ಟಿಯವರೆಗೆ ಕಾಂಗ್ರೆಸ್ ಪಾದಯಾತ್ರೆ

ಸವದತ್ತಿ 05: ಪಕ್ಕದಲ್ಲಿಯೇ ಮಲಪ್ರಭಾ ನದಿ ಇದ್ದರೂ ಈ ಭಾಗದ ಜನರಿಗೆ ಪ್ರಯೋಜನವಿಲ್ಲದಂತಾಗಿದ್ದು, ತಾಲೂಕಿನ ಸಾಕಷ್ಟು ಹಳ್ಳಿಗಳು ನೀರಾವರಿಯಿಂದ ವಂಚಿತವಾಗಿ ರೈತರ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಹೇಳಿದರು. 

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ತಾಲೂಕಿನ ಇನಾಂಹೊಂಗಲ ಗ್ರಾಮದಿಂದ ಯರಗಟ್ಟಿಯವರೆಗೆ 75ಕಿ.ಮೀ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ತಾಲೂಕಿನ ಇನಾಮಹೊಂಗಲ, ಚಿಕ್ಕ ಉಳ್ಳಿಗೇರಿ ಹಿರೇಉಳ್ಳಿಗೇರಿ, ಇನಾಮಹೊಂಗಲ ಸೇರಿದಂತೆ ಅನೇಕ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿದ್ದು, ಮುಂಬರುವ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ದಿಗಾಗಿ  ಕಾಂಗ್ರೆಸ ಪಕ್ಷವನ್ನು ಬೇಂಬಲಿಸಬೇಕೆಂದು ಮನವಿಸಿದರು. 

ಪಾದಯಾತ್ರೆಗೆ ಚಾಲನೆ ನೀಡಿದ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮೀಜಿ ಹಾಗೂ ಮಾಜಿ ಶಾಸಕ ಸುಭಾಸ ಕೌಜಲಗಿಯವರು ಮಾತನಾಡಿ, 75 ನೇ ಸ್ವಾತಂತ್ರೋತ್ಸವವನ್ನು ನಾವೆಲ್ಲರೂ ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕೆಂದರು. 

ಪಂಚನಗೌಡ ದ್ಯಾಮನಗೌಡ ಮಾತನಾಡಿ, ಅಂದು ಮಹಾತ್ಮಾ  ಗಾಂಧೀಜಿಯವರು ಕಟ್ಟಿದ ಕಾಂಗ್ರೆಸ್ ಪಕ್ಷ ಇಂದು ಎಲ್ಲರ ಸಹಬಾಗಿತ್ವದೊಂದಿಗೆ ಮುನ್ನಡೆಯುತ್ತಿದೆ ಎಂದರು. 

ಅಂಬರೀಷ ಎಲಿಗಾರ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಮುಖ್ಯವಾಗಿಟ್ಟುಕೊಂಡು ನಾವೆಲ್ಲಾ ಒಗ್ಗಟ್ಟಾಗಬೇಕಿದ್ದು, ಇಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಎಂದರು. ನಾವೆಲ್ಲಾ ಒಗ್ಗಟ್ಟಿನಿಂದ ಶ್ರಮಿಸಿದರೆ ಮುಂಬರುವ ದಿನಗಳಲ್ಲಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಕಾಂಗ್ರೆಸ ಪಕ್ಷದ ಶಾಸಕರೆ ಆಡಳಿತದ ಚುಕ್ಕಾಣೆ ಹಿಡಿಯಲಿದ್ದಾರೆ ಎಂದರು. 

ಮಾಜಿ ಶಾಸಕ ಆರ್‌.ವಿ.ಪಾಟೀಲ ಹಾಗೂ ಡಿ.ಡಿ.ಟೋಪೋಜಿ ಮಾತನಾಡಿದರು. ಕಾಂಗ್ರೆಸ ಮುಖಂಡರಾದ ಕೆ.ಕೆ.ಪುಣೇದ, ರವೀಂದ್ರ ಯಲಿಗಾರ, ಶಂಕ್ರಯ್ಯ ಪಾಟೀಲ, ಮಹಾರಾಜಗೌಡ ಪಾಟೀಲ, ಪಕ್ಕೀರ​‍್ಪ ಹದ್ದಣ್ಣವರ, ಮಲ್ಲು ಜಕಾತಿ, ಪ್ರವೀಣ ರಾಮಪ್ಪನವರ, ಸಿ.ಬಿ.ಬಾಳಿ, ಚಂದ್ರು ಜಂಬ್ರಿ, ವಿರಭದ್ರ​‍್ಪ ಪಟ್ಟಣಶೆಟ್ಟಿ, ರವಿ ದೊಡಮನಿ, ಕಲ್ಲಪ್ಪ ಪೂಜೇರ, ಸೇರಿದಂತೆ ಕಾಂಗ್ರೆಸ ಪಕ್ಷದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ