ಸಿಎಂ ಸಿದ್ದರಾಮಯ್ಯನವರನ್ನು ಅದ್ದೂರಿ ಸ್ವಾಗತ ಕೋರಿದ ಕಾಂಗ್ರೆಸ ಮುಖಂಡರು
ಶಿಗ್ಗಾವಿ 25 : ಹಾವೇರಿ ಜಿಲ್ಲೆಯಲ್ಲಿ ಇಂದು ಪ್ರಗತಿ ಪರೀಶೀಲನಾ ಸಭೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾವೇರಿ ಹೋಗುವ ಪಟ್ಟಣದ ಪ್ರವಾಸಿ ಮಂದಿರ ಮಾರ್ಗ ಮಧ್ಯದಲ್ಲಿ ತಾಲೂಕಿನ ಕೈ ಮುಖಂಡರು ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿ ಬೀಳ್ಕೊಟ್ಟರು.
ಮಾಜಿ ಶಾಸಕ ಸಯ್ಯದ್ ಅಜ್ಜಂಪೀರ್ ಖಾದ್ರಿ ಅವರ ನೇತೃತ್ವದಲ್ಲಿ ಪಟ್ಟಣದ ಗರುಡ ಹೋಟೆಲ್ ಮುಂಭಾಗದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಸಿಎಂ ರವರನ್ನು ಸ್ವಾಗತಿಸಿದರೇ ಇತ್ತ ಪ್ರವಾಸಿ ಮಂದಿರದ ಬಳಿ ಪರಾಜಿತ ಅಭ್ಯರ್ಥಿ ಯಾಸಿರ್‌ಖಾನ್ ಪಠಾಣ್ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಕುನ್ನೂರ್, ಸೋಮಣ್ಣ ಬೇವಿನಮರದ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಬುಲಿಂಗಪ್ಪ ಆಜೂರ ಸೇರಿದಂತೆ ಸದಸ್ಯರು ಹಾಗೂ ನೂರಾರು ಕಾರ್ಯಕರ್ತರು ಅಭಿಮಾನಿಗಳು ಸ್ವಾಗತಿಸಿ ಬಿಳ್ಕೊಟ್ಟರು.