ಸೌಂದತ್ತಿ

ಭಾಗ್ಯಗಳ ಯೋಜನೆ ನೆಪದಲ್ಲಿ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ: ಮಾಮನಿ

ಭಾಗ್ಯಗಳ ಯೋಜನೆ ನೆಪದಲ್ಲಿ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ: ಮಾಮನಿ

ಸವದತ್ತಿ : ಕರ್ನಾಟಕದಲ್ಲಿ ಕಾಂಗ್ರೆಸ್ ಜನತೆಗೆ ಸುಳ್ಳು ಆಶ್ವಾಸನೆ ನೀಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ  ಆರೋಪಿಸಿದ್ದಾರೆ.

ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಜನರಿಗೆ ಸುಳ್ಳು ಗ್ಯಾರೆಂಟಿ ಕೇಂದ್ರ ಸರಕಾರ ಈಗಾಗಲೇ 5 ಕೆಜಿ ಅಕ್ಕಿ ಬಡವರಿಗೆ ಉಚಿತವಾಗಿ ವಿತರಿಸುತ್ತಿದ್ದು, ಇದನ್ನು ಹೊರತು ಪಡಿಸಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಯಲ್ಲಿ ಹೇಳಿದಂತೆ ಇನ್ನೂ ಹೆಚ್ಚುವರಿಯಾಗಿ 10 ಕೆಜಿ ಅಕ್ಕಿ ನೀಡಿ ತನ್ನ ಮಾತನ್ನು ಉಳಿಸಿಕೊಳ್ಳಲಿ ಎಂದರು. ಈಗಿನ ಕಾಂಗ್ರೆಸ್ ಸರಕಾರಕ್ಕೆ ಭವಿಷ್ಯವಿಲ್ಲ ಎಂದು ವಿರೂಪಾಕ್ಷ ಮಾಮನಿ ಹೇಳಿದರು ಇದು ಒಂದೆರಡು ವರ್ಷಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು.

ನಂತರ ಸಂಜೀವಕುಮಾರ ನವಲಗುಂದ ಮಾತನಾಡಿ, ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಗೆಲುವಿನ ಹಾದಿಯನ್ನು ಸುಗಮವಾಗಿಸಿಕೊಳ್ಳ ಬೇಕೆಂದರು ಸಂಘಟನೆಯಲ್ಲಿ ನಾವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆ ಮತ್ತು ರಾಜ್ಯದ ಪ್ರಮುಖ ಮುಖಂಡರ ಸಹಕಾರ ನಮಗೆ ಅತ್ಯವಶ್ಯವಾಗಿದೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧಗೊಳ್ಳಬೇಕಿದೆ'', ಎಂದರು.

ಸಂಸದ ಮಂಗಲ ಅಂಗಡಿ, ರತ್ನಾ ಮಾಮನಿ, ಜಗದೀಶ ಶಿಂತ್ರಿ, ಜಗದೀಶ ಹನಸಿ, ಡಾ.ಎನ್.ಸಿ. ಬೆಂಡಿಗೇರಿ, ಡಾ.ನಯನಾ ಭಸ್ಮ  ಜಗದೀಶ ಕೌಜಗೇರಿ, ಈರಣ್ಣ ಚಂದರಗಿ, ಚಂದ್ರು ಅಳಗೋಡಿ, ವಿರೂಪಾಕ್ಷ ಹನಸಿ ಸೇರಿದಂತೆ ಭಾಜಪ ಕಾರ್ಯಕರ್ತರು ಉಪಸ್ಥಿತರಿದ್ದರ 

ಸುದ್ದಿ ಓದಿ