ಕಾಂಗ್ರೆಸ್ ಸರ್ಕಾರ ಅಂದರೆ ಸ್ಕ್ಯಾಮ್ ಸರ್ಕಾರ: ಇಬ್ಬನಿ ಬೊಮ್ಮಾಯಿ
ಕಾಂಗ್ರೆಸ್ ಸರ್ಕಾರ ಅಂದರೆ ಸ್ಕ್ಯಾಮ್ ಸರ್ಕಾರ: ಇಬ್ಬನಿ ಬೊಮ್ಮಾಯಿ
ಶಿಗ್ಗಾವಿ 07 : ಕಾಂಗ್ರೆಸ್ ಸರ್ಕಾರ ಅಂದರೆ ಸ್ಕ್ಯಾಮ್ ಸರ್ಕಾರ, ಬಿಜೆಪಿ ಸರ್ಕಾರ ಅಂದರೆ ಅಭಿವೃದ್ಧಿ ಸರ್ಕಾರ ಎಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ಪತ್ನಿ ಇಬ್ಬನಿ ಭರತ್ ಬೊಮ್ಮಾಯಿ ಹೇಳಿದ್ದಾರೆ.
ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಗರಣ ನಿಶ್ಚಿತ, ಖಚಿತ, ಶಾಸ್ವತ, ಅದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ನಿಶ್ಚಿತ, ಶಾಸ್ವತ ಖಚಿತ ಎಂದು ಹೇಳಿದರು.
ಕಾಂಗ್ರೆಸ್ ನವರು ಕೊಟ್ಟಿರುವ ಗ್ಯಾರೆಂಟಿಗಳು ತಾತ್ಕಾಲಿಕ, ಅವರು ಅಧಿಕಾರಕ್ಕೆ ಬರುವ ತನಕ ಮಾತ್ರ ಗ್ಯಾರೆಂಟಿ, ನಮ್ಮ ಮಾವನವರಾದ ಬಸವರಾಜ ಬೊಮ್ಮಾಯಿಯವರು ಮಾಡಿರುವುದು ಶಾಸ್ವತ ಗ್ಯಾರೆಂಟಿ. ನಮ್ಮ ಮಾವನವರು ಮನೆಗಳನ್ನು ಕಟ್ಟಿದ್ದಾರೆ, ಸಿಸಿ ರಸ್ತೆ ಮಾಡಿದ್ದಾರೆ, ಎಲ್ಲರಿಗೂ ಉದ್ಯೋಗ ಕೊಟ್ಟಿದ್ದಾರೆ. ಎಲ್ಲವೂ ಶಾಸ್ವತ ಗ್ಯಾರೆಂಟಿ ಕೊಟ್ಟಿದ್ದಾರೆ. ನಮ್ಮ ಮಾವನವರು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯನ್ನು ಭರತ್ ಬೊಮ್ಮಾಯಿಯವರು ಮುಂದುವರೆಸಿಕೊಂಡು ಹೋಗುತ್ತಾರೆ. ನಮ್ಮ ಮಾವನವರು ಅಭಿವೃದ್ಧಿ ಬಗ್ಗೆ ಕಂಡ ಕನಸು ನನಸು ಮಾಡುತ್ತಾರೆ. ಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿ ಮುಂದುವರೆಸಲು ಎಲ್ಲರೂ ಒಗ್ಗಟ್ಟಾಗಿ ಭರತ್ ಬೊಮ್ಮಾಯಿ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.