ರಾಜ್ಯದಲ್ಲಿ ಮತ್ತೇ ಕಾಂಗ್ರೆಸ್ ಸರ್ಕಾರ: ಕೆ.ಟಿ. ಬೆಟಗೇರಿ
ಲೋಕದರ್ಶನ ವರದಿ
ಯಲಬುರ್ಗಾ 18: ಮುಂಬರುವ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯುವುದರೊಂದಿಗೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ತಾಲೂಕಾ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಟಿ. ಬೆಟಗೇರಿ ಕರಮುಡಿ ಹೇಳಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ರಾಜ್ಯದ ಮತದಾರ ಪ್ರಭು ಮತ್ತೊಮ್ಮೆ ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಹೊಂದಿದ್ದು ಹೀಗಾಗಿ ಕಾಂಗ್ರೇಸ್ ಕರ್ನಾಟಕದ ಪ್ರಸ್ತುತ ರಾಜಕೀಯ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೆ ಅನಿವಾರ್ಯವಾಗಿದ್ದು ಹೀಗಾಗಿ ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಬಹುಮತ ಪಡೆಯವುದು ನಿಶ್ಚಿತವಾಗಿದ್ದು ಕಾಂಗ್ರೇಸ್ನಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಿ ಆ ಮೂಲಕ ವಿಜಯ ದಾಖಲಿಸಲಿದ್ದು, ಮುಖ್ಯವಾಗಿ ರಾಜ್ಯದಲ್ಲಿ ಇಂದು ಆಡಳಿತ ಪಕ್ಷ ಬಿಜೆಪಿ ಎಲ್ಲ ರಂಗಗಳಲ್ಲಿ ವಿಫಲರಾಗಿದ್ದು ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಜನತೆ ಮತ ನೀಡಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಟಿ. ಬೆಟಗೇರಿ ಕರಮುಡಿ ಹೇಳಿದ್ದಾರೆ.