ಚಿಕ್ಕೋಡಿ

ಕಾಂಗ್ರೆಸ್ ಸರಕಾರದ ಆಡಳಿತ ಉತ್ತಮವಾಗಿದೆ : ಶಾಸಕ ರಾಜು ಕಾಗೆ

ಕಾಂಗ್ರೆಸ್ ಸರಕಾರದ ಆಡಳಿತ ಉತ್ತಮವಾಗಿದೆ : ಶಾಸಕ ರಾಜು ಕಾಗೆ

ಸಂಬರಗಿ  26: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 4 ತಿಂಗಳು ಗತಿಸುತ್ತಾ ಬಂದಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರು ಕೂಡಿಕೊಂಡು ಉತ್ತಮ ರೀತಿಯಲ್ಲಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. 

ಅವರು ಸೋಮವಾರ  ಗಡಿಭಾಗದ ಬಮ್ಮಾಳ ಗ್ರಾಮಕ್ಕೆ  ಸರಕಾರದ ಶುದ್ದ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾದ ಜಲಜೀವನ ಮೀಷನ ಯೋಜನೆಯಡಿ 1.10 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವವರು ಮಾತನಾಡಿದರು. 

ರಾಜ್ಯದಲ್ಲಿ ಮರು ಡಿಸಿಎಂ ಹುದ್ದೆಗಳ ಸೃಷ್ಟಿಸಬೇಕೆಂಬ ಕೂಗು ಕೇಳಿ ಬರುತ್ತಿದೆ ಎಂದು ಕೇಳಿದಾಗ ಅದು ಹೈ ಕಮಾಂಡಿಗೆ ಬಿಟ್ಟ ವಿಚಾರ ಎಂದು ಶಾಸಕ ರಾಜು ಕಾಗೆ ನಯವಾಗಿ ಜಾರಿಕೊಂಡರು.  ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಮೇಲಿನ ನಂಬಿಕೆಯಿಂದ ಆಶೀರ್ವಾದ ಮಾಡಿದ್ದಾರೆ. ಜನರ ವಿಶ್ವಾಸ ನಂಬಿಕೆಯಂತೆ ಕೆಲಸ ಮಾಡಲು ನಮ್ಮ ಮುಂದೆ ಬಸವೇಶ್ವರ ಏತ ನೀರಾವರಿ ಯೋಜನೆ, ಕ್ಷೇತ್ರದ ತುಂಬೆಲ್ಲ ರೈತರ ಜಮೀನುಗಳಿಗೆ ಹೋಗಲು ಒಳ ರಸ್ತೆಗಳು, ನಿರಂತರ ವಿದ್ಯುತ್ ವಿತರಣೆ, ಶಾಲಾ ಕಟ್ಟಡ, ಆಸ್ಪತ್ರೆ ಸೇರಿದಂತೆ ಅನೇಕ ಸವಾಲುಗಳಿವೆ. ಅವುಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬರುವ ಐದು ವರ್ಷದೊಳಗೆ ಹಂತಹಂತವಾಗಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಶಾಸಕ ರಾಜು ಕಾಗೆ ಭರವಸೆ ನೀಡಿದರು. 

ಈ ವೇಳೆ ಅರಳಿಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸನಗೌಡ ಪಾಟೀಲ(ಬಮ್ನಾಳ), ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ ಬಾಗಡಿ, ಜಲನೀವನ್ ಮಿಷನ್ ಯೋಜನೆಯ ಅಧಿಕಾರಿ ಅಕ್ಷಯ ಚುರಮುರಿ, ಗುತ್ತಿಗೆದಾರ ಮುರಗೇಶ ಪಾಟೀಲ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪಿ.ಸಿ.ಬತಗುಣಕಿ, ಎ.ವಾಯ್‌.ಜಮಾದಾರ, ಮುಖಂಡರಾದ ಕಾಮಗೌಡ ಪಾಟೀಲ, ಅಶೋಕ ಗಂಗಾಧರ, ತಾಜಾಜಿ ಶಿಂಧೆ, ಕೃಷ್ಣಾ ನಾಯಿಕ, ಮುರಗೇಶಗೌಡ ಪಾಟೀಲ ಇಬ್ರಾನ್ ಸೈಯದ, ರಘುನಾಥ ಅವಳೆಕರ, ಶಿವಾಜಿ ಜಾಧವ, ಅಜೀತ ಅವಳೆಕರ, ಪರುಶರಾಮ ನಾಯಿಕ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ