ಶಿಗ್ಗಾವ್

ಕಾಂಗ್ರೇಸ್ ಅಭ್ಯರ್ಥಿ ಯಾಸೀರ ಅಹ್ಮದಖಾನ ಪಠಾಣ ನಾಮಪತ್ರ ಸಲ್ಲಿಕೆ

ಕಾಂಗ್ರೇಸ್ ಅಭ್ಯರ್ಥಿ ಯಾಸೀರ ಅಹ್ಮದಖಾನ ಪಠಾಣ ನಾಮಪತ್ರ ಸಲ್ಲಿಕೆ

ಲೋಕದರ್ಶನ ವರದಿ

ಶಿಗ್ಗಾವಿ 21: ಶಿಗ್ಗಾವಿ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಯಾಸೀರ ಅಹ್ಮದಖಾನ ಪಠಾಣ ಗುರುವಾರ ಅಪಾರ ಬೆಂಬಲಿಗರೊಂದಿಗೆ ಸವಣೂರ ವೃತ್ತದಲ್ಲಿರುವ ವೀರ ರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ನಂತರ ಭವ್ಯವಾದ ಮೇರವಣಿಗೆಯೊಂದಿಗೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ನಂತರ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದರು. 

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ, ಮುಖಂಡರಾದ ಮಂಜುನಾಥ ಕುನ್ನೂರ, ಸೋಮಣ್ಣ ಬೇವಿನಮರದ, ಎಸ್.ಬಿ.ಪಾಟೀಲ, ಪ್ರಕಾಶ ಹಾದಿಮನಿ, ರಾಜೇಶ ಕಮ್ಮಾರ, ಪ್ರೇಮಾ ಪಾಟೀಲ, ರಾಜು ಕುನ್ನೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ