ಅಪಾರ ಬೆಂಬಲಗರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಅರಸಿಕೇರಿ ಎನ್ ಕೊಟ್ರೇಶ್ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ
ಹರಪನಹಳ್ಳಿ 19: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅರಸಿಕೇರಿ ಎನ್ ಕೊಟ್ರೇಶ್ ಬುಧವಾರ ನಾಮಪತ್ರ ಸಲ್ಲಿಸಿದರು. ಹರಪನಹಳ್ಳಿ ಪಟ್ಟಣದ ಶ್ರೀ ಕೋಟೆ ಆಂಜನೇಯ ದೇವಸ್ಥಾನಕ್ಕೆ ಬೇಟಿ ನೀಡಿ ತಮ್ಮ ಕುಟುಂಬದೊಂದಿಗೆ ವಿಷೇಶ ಪೂಜೆ ಸಲ್ಲಿಸಿ ನಂತರ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಮಾಜಿ ಸಚಿವರು ಪಿ ಟಿ ಪರಮೇಶ್ವರ ನಾಯ್ಕ ಮತ್ತು ತಾಲೂಕಿನ ಕಾಂಗ್ರೆಸ್ ಮುಖಂಡರ ಜೊತೆಗೂಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾನು ಒಬ್ಬ ಬಡ ಕುಟುಂಬದ ರೈತನ ಮಗ ಹರಪನಹಳ್ಳಿ ತಾಲೂಕಿನ ಮಗ ಹಲವಾರು ವರ್ಷಗಳಿಂದ ಸ್ಥಳೀಯರಿಗೆ ಅವಕಾಶ ಇರಲಿಲ್ಲ ಈಗ ಅವಕಾಶ ಸಿಕ್ಕಿದೆ ಕ್ಷೇತ್ರದಲ್ಲಿ ಜನಪರ ಕಾರ್ಯಗಳನ್ನು ಮಾಡಲು ನನಗೆ ಒಂದು ಅವಕಾಶ ಕೊಡಿ ಬಿಜೆಪಿ ಪಕ್ಷ ಸುಳ್ಳಿನ ಕಂತೆಯಾಗಿದೆ. ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ನನಗೆ ಶಕ್ತಿ ನೀಡಿ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಚ್ ಬಿ ಪರಶುರಾಮಪ್ಪ, ಮಾಜಿ ಪುರಸಭೆ ಅಧ್ಯಕ್ಷ ಎಚ್ ಕೆ ಹಾಲೇಶ್ ಯೂತ್ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಪರಶುರಾಮ್ ಛಲವಾದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬೇಲೂರು ಅಂಜಿನಪ್ಪ, ಪ್ರೇಮ್ ಕುಮಾರ್, ಮಂಜುನಾಥ್, ಜಿಲ್ಲಾ ಟಾಸ್ಕ್ ಫೋರ್ಸ್ ಸದಸ್ಯ ಅಧ್ಯಕ್ಷ ಶಶಿಧರ್ ಪೂಜಾರ್ ಮಾಜಿ ನಾಮ ನಿರ್ದೇಶಕ ಶ್ರೀಮತಿ ಸುವರ್ಣಮ್ಮ ಚಲವಾದಿ ಸಿಎನ್ ಅರವಿಂದ್ ಅಲ್ಲಭಕ್ಷಿ ಚಮಾನ್ ಶರೀಫ್ ಲಾಟಿ ದಾದಾಪೀರ್ ಲಾಟಿ ಸಲೀಂ ಸಿದ್ದಿಕ್ ಎಂಕೆ, ಮೋಸ ಸಾಬ್, ಪಟ್ನಾಮದ ಪರಶುರಾಮ್ ಹೊರಕೇರಿ ರಮೇಶ್, ತಳವಾರ್ ವೆಂಕಟೇಶ್ ಕಿಂದ್ರಿ ಹನುಮಂತಪ್ಪ ತಳವಾರ್ ಅಜ್ಜಯ್ಯ ತಳವಾರ್ ಹಾಲಪ್ಪ ಇತರರು ಭಾಗಿಯಾಗಿದ್ದರು