ರಾಣೆಬೆನ್ನೂರ

ಕಾಂಗ್ರೆಸ್ ಪ. ಪಂ. ಜಿಲ್ಲಾಧ್ಯಕ್ಷರಾಗಿ ಬಸವರಾಜ್ ತಳವಾರ ನೇಮಕ

ಕಾಂಗ್ರೆಸ್ ಪ. ಪಂ. ಜಿಲ್ಲಾಧ್ಯಕ್ಷರಾಗಿ ಬಸವರಾಜ್ ತಳವಾರ ನೇಮಕ

ರಾಣೆಬೆನ್ನೂರು 23:  ಕಾಂಗ್ರೆಸ್ ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸದಾಕಾಲ ಮಾನ ಮನ್ನಣೆ ಗೌರವ ಸ್ಥಾನಮಾನಗಳು ಇದ್ದೇ ಇದೆ ಎನ್ನುವುದಕ್ಕೆ ಇಂದು ನಾವೇ ಸಾಕ್ಷಿಯಾಗಿದ್ದೇವೆ ಎಂದು ಕಾಂಗ್ರೆಸ್ ಕಾರ್ಯಕರ್ತ  ಪರಿಶಿಷ್ಟ ಪಂಗಡ ವಿಭಾಗದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಬಸವರಾಜ. ಟಿ ತಳವಾರ ಹೇಳಿದರು. ಅವರು ಬುಧವಾರ ವಾಗಿಶ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.  

ತಮ್ಮ ಈ ಆಯ್ಕಗೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮತ್ತು ಜಿಲ್ಲಾಧ್ಯಕ್ಷರಾದ ಎಂ.ಎಂ.ಹಿರೇಮಠ.ಅವರು ಶಿಫಾರಸು ಮಾಡಿದ್ದಾರೆ ಎಂದರು.  ತಮ್ಮನ್ನು ಆಯ್ಕೆ ಮಾಡಿರುವ ಕುರಿತು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪರಿಶಿಷ್ಟ ಪಂಗಡ  ಘಟಕದ ರಾಜ್ಯಾಧ್ಯಕ್ಷರಾದ ಕೆ. ಪಿ. ಪಾಲಯ್ಯ ಅವರು ಪತ್ರ ರವಾನಿಸಿ, ದ್ರೀಡಿಕರಿಸಿದ್ದಾರೆ. ಕೇಂದ್ರದಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾದ  ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕೈ ಬಲಪಡಿಸಲು ಇಂದಿನಿಂದಲೇ ಕಾಂಗ್ರೆಸ್ ಪಕ್ಷದ  ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯ ಪ್ರವರ್ತರಾಗುವಂತೆ ಬಸವರಾಜ ತಳವಾರ ಅವರಿಗೆ ರವಾನಿಸಿರುವ ಆದೇಶ ಪತ್ರದಲ್ಲಿ ಪಾಲಯ್ಯ ಅವರು ಸೂಚಿಸಿದ್ದಾರೆ. ಪರಿಶಿಷ್ಟ ಪಂಗಡದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ತಳವಾರ್ ಅವರಿಗೆ ಮಾಜಿ ವಿಧಾನ ಸಭಾಧ್ಯಕ್ಷ ಕೆ. ಬಿ. ಕೋಳಿವಾಡ ಅವರು ಹಾರ್ದಿಕವಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದಿಸಿದರು. ಮಾಧ್ಯಮಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಚಂದ್ರ​‍್ಪ ಬೇಡರ, ರವೀಂದ್ರಗೌಡ ಪಾಟೀಲ್, ಸಣ್ಣ ತಮ್ಮಪ್ಪ ಬಾರ್ಕಿ, ಪ್ರಕಾಶ ಕೋಳಿವಾಡ, ಕೃಷ್ಣಪ್ಪ ಕಂಬಳಿ, ಶಶಿಧರ ಬಸೇನಾಯ್ಕರ್, ನಾಗಪ್ಪ ಸಣ್ಣಮನಿ, ಕರಬಸಪ್ಪ ಕೂಲೆರ್, ಪರಶುರಾಮ ತಳವಾರ್, ಮಂಜು ಮುಗುದೂರ, ರಮೇಶ್ ಸೇರಿದಂತೆ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ