ಗ್ಯಾರಂಟಿ ಸಮಿತಿ ಅಧ್ಯಕ್ಷ, ಸದಸ್ಯರಿಗೆ ಅಭಿನಂದನೆ
ಶಿಗ್ಗಾವಿ 08: ತಾಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯನ್ನು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪೂಜೆ ಸಲ್ಲಿಸಿ ತಾಲೂಕಾಧಿಕಾರಿಗಳ ಹಾಗೂ ಪಕ್ಷದ ಮುಖಂಡರುಗಳ ಉಪಸ್ಥಿತಿಯಲ್ಲಿ ಪ್ರಾರಂಭಿಸಲಾಯಿತು.
ಬುದ್ಧ ಬಸವ ಅಂಬೇಡ್ಕರ್ ಭಾವಚಿತ್ರ ನೀಡಿ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಭಿನಂದನೆಯನ್ನು ವಕ್ತಾರ ಮಂಜುನಾಥ ಮಣಣ್ಣನವರ ಸಲ್ಲಿಸಿದರು. ಚಂದ್ರು ಕೊಡ್ಲಿವಾಡ, ಅಶೋಕ್ ವಾಲಿಕಾರ, ಗದಿಗೆಪ್ಪ ಬಳ್ಳಾರಿ, ಗಂಗಾಧರ ಗಂಗಣ್ಣವರ, ಯುನುಸ್ ಅಥಾವುಲ್ಲಾಖಾನ, ಮಾಲತೇಶ ಸಾಲಿ, ರವಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.