ಸಿರುಗುಪ್ಪ

ಉಪ ನಿರ್ದೇಶಕರಾಗಿ ಬಿ ಕೆ ರಾಮಲಿಂಗಪ್ಪಗೆ ಅಭಿನಂದನೆ

ಉಪ ನಿರ್ದೇಶಕರಾಗಿ ಬಿ ಕೆ ರಾಮಲಿಂಗಪ್ಪಗೆ ಅಭಿನಂದನೆ

ಲೋಕದರ್ಶನ ವರದಿ 

ಸಿರುಗುಪ್ಪ 27: ಬಳ್ಳಾರಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಿಕೆ. ರಾಮಲಿಂಗಪ್ಪ ಅವರನ್ನು ಕರ್ನಾಟಕ ರಾಜ್ಯ ಸರ್ಕಾರವು ಉಪ ನಿರ್ದೇಶಕರನ್ನಾಗಿ ಮುಂಬಡ್ತಿ ಉನ್ನತ ಹುದ್ದೆಯನ್ನು ನೀಡಿ ಆದೇಶ ಹೊರಡಿಸಿ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾಯಿಸಿದ ಬಿ ಕೆ ರಾಮಲಿಂಗಪ್ಪ ಅವರು ಬಳ್ಳಾರಿ ಜಿಲ್ಲೆಯಲ್ಲಿ ಆರೂವರೆ ವರ್ಷ ಕಾಲ ಎಲ್ಲರೊಡನೆ ಉತ್ತಮ ರೀತಿಯಲ್ಲಿ ಪ್ರೀತಿ ವಿಶ್ವಾಸ ನಿಸ್ವಾರ್ಥದಿಂದ  ಸೇವೆಯನ್ನು ಸಲ್ಲಿಸಿರುತ್ತಾರೆ. ವಿಜಯನಗರ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಗಳ ಪ್ರಭಾರಿ ಸೇವೆ ಸಲ್ಲಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿರುವ ಬಿ ಕೆ ರಾಮಲಿಂಗಪ್ಪ ಅವರ ಯಶಸ್ಸಿಗೆ ದೊರೆತಿರುವ ಈ ಗೌರವಕ್ಕೆ ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡ ಸಮಾಜ ಸುಧಾರಕ ಎ ಅಬ್ದುಲ್ ನಬಿ ಅವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ