ರಾಷ್ಟ್ರೀಯ

ಹರಿಯಾಣ ಗಡಿಯಲ್ಲಿ ಪೊಲೀಸರು- ಕೈ ಕಾರ್ಯಕರ್ತರ ನಡುವೆ ತಳ್ಳಾಟ

ಹರಿಯಾಣ ಗಡಿಯಲ್ಲಿ ಪೊಲೀಸರು- ಕೈ ಕಾರ್ಯಕರ್ತರ ನಡುವೆ ತಳ್ಳಾಟ

ಚಂಡೀಗಢ,  ಅಕ್ಟೋಬರ್ 6 : ಸಂಸತ್ತು ಅಂಗೀಕರಿಸಿದ ಕೃಷಿ ತಿದ್ದುಪಡಿ  ಮಸೂದೆ ವಿರೋಧಿಸಿ ಕಾಂಗ್ರೆಸ್ ನಿಂದ  ದೇಶವ್ಯಾಪಿ  ಪ್ರತಿಭಟನೆ ನಡೆಯುತ್ತಿದ್ದು , ಪಂಜಾಬ್ ಸರ್ಕಾರದ ಜೊತೆಯಾಗಿ ಖೇತಿ ಬಚಾವೋ ಎಂಬ ಹೆಸರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಇಂದು ರಾಹುಲ್ ಗಾಂಧಿ ಅವರನ್ನು  ಹರಿಯಾಣ ಗಡಿ ಪ್ರವೇಶಿಸದಂತೆ ತಡೆಯಲಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಪೊಲೀಸರು ಹಾಗೂ ಕೈ ಕಾರ್ಯಕರ್ತರ ನಡುವೆ ತಳ್ಳಾಟ ಏರ್ಪಟ್ಟಿದೆ. ಜೊತೆಗೆ ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಘೋಷಣೆ ಕೇಳಿಬಂದಿದೆ. 

ಈ ಹಿನ್ನೆಲೆ ಟ್ವೀಟ್ ಮಾಡಿರುವ ರಾಹುಲ್ ನಾನು ಇಲ್ಲಿಂದ ಕದಲುವುದಿಲ್ಲ , ನಾನು ಇಲ್ಲಿ ಸಂತೋಷದಿಂದ ಕಾಯುತ್ತೇನೆ, 1 ಗಂಟೆ, 5 ಗಂಟೆ, 24 ಗಂಟೆ, 100 ಗಂಟೆ, 1000 ಗಂಟೆ  5000 ಗಂಟೆ ಎಂದು ನಂತರ ಟ್ವೀಟ್ ಮಾಡಿದ್ದಾರೆ. 

ಸುದ್ದಿ ಓದಿ