ಮೃತರ ಕುಟುಂಬಕ್ಕೆ ಡಾ.ಪ್ರಭುಗೌಡ ಲಿಂಗದಳ್ಳಿ ಸಾಂತ್ವನ
ತಾಳಿಕೋಟಿ: ಇತ್ತೀಚೆಗೆ ಅಸ್ಕಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಶಾಂತಯ್ಯ ಹಿರೇಮಠ (51) ಇವರ ಮನೆಗೆ ಭೇಟಿ ನೀಡಿದ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.
ನಂತರ ಮಾತನಾಡಿದ ಅವರು ಜೀವ ಅತ್ಯಮೂಲ್ಯವಾದದ್ದು ಸಮಸ್ಯೆಗಳು ತಾತ್ಕಾಲಿವಾದವುಗಳಾಗಿವೆ. ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವ ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಆತ್ಮಹತ್ಯೆ ಎಂಬುದು ಸಮಸ್ಯೆಯ ಪರಿಹಾರ ಅಲ್ಲ ಇದರಿಂದ ಅವಲಂಬಿತರು ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ಮೃತರು ಕುಟುಂಬದ ಆಧಾರಸ್ಥಂಭವಾಗಿದ್ದರು ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಅವಲಂಬಿತರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಡಾ.ಪ್ರಭುಗೌಡ ಅಸ್ಕಿ ಅವರು ಮಾತನಾಡಿ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಹೃದಯವೈಶಾಲ್ಯತೆಯನ್ನು ಹೊಂದಿದ ವ್ಯಕ್ತಿ, ಈ ಕ್ಷೇತ್ರದಲ್ಲಿ ಎಲ್ಲಿಯೇ ಇಂಥಹ ಘಟನೆಗಳು ಸಂಭವಿಸಿದರೆ ಅಲ್ಲಿಗೆ ಧಾವಿಸಿ ಅವರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ ನಾವೆಲ್ಲರು ಅವರನ್ನು ಸಹಕರಿಸುವ ಅಗತ್ಯ ಇದೆ ಎಂದು ಹೇಳಿದರು.
ಈ ಸಮಯದಲ್ಲಿ ಗ್ರಾಪಂ ಸದಸ್ಯ ಕಿರಣ ಬಿರಾದಾರ, ರುದ್ರಗೌಡ ಬಿರಾದಾರ, ವಿಜಯಕುಮಾರ ಹಿರೇಮಠ, ಬಾಲು ತಳವಾರ, ಶಿವಾನಂದ ಹಿರೇಮಠ, ಮಲ್ಲಯ್ಯ ಹಿರೇಮಠ, ಸಿ.ಎಂ. ಟಕ್ಕಳಕಿ ಮತ್ತಿತರರು ಇದ್ದರು