ಬೈಲಹೊಂಗಲ

ಅತಿಥಿ ಉಪನ್ಯಾಸಕರನ್ನು ಕೈಬಿಟ್ಟಿರುವ ಕ್ರಮಕ್ಕೆ ಖಂಡನೆ

ಅತಿಥಿ ಉಪನ್ಯಾಸಕರನ್ನು ಕೈಬಿಟ್ಟಿರುವ ಕ್ರಮಕ್ಕೆ ಖಂಡನೆ

ಬೈಲಹೊಂಗಲ 21: 2020-21ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕಾರ್ಯ ನಿರ್ವಹಿಸಿರುವ 14,183 ಅತಿಥಿ ಉಪನ್ಯಾಸಕರಲ್ಲಿ ಶೇ.50ರಷ್ಟು ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡಿದ್ದು, ಇತರರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘಟಣೆಯ ಪಧಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಅರ್ಪಿಸಿದರು.

ಮಹಾವಿದ್ಯಾಲಯಗಳಲ್ಲಿ ಕಳೆದ ಸಾಲಿಗಿಂತಲೂ ಈ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ಅನುಪಾತದ ಆಧಾರದ ಮೇಲೆ ಕಾರ್ಯಭಾರವೂ ಹೆಚ್ಚಳವಾಗಿದೆ. ಈಗಾಗಲೇ ಕಾಲೇಜುಗಳು ಪ್ರಾರಂಭವಾಗಿದ್ದು ಅತಿಥಿ ಉಪನ್ಯಾಸಕರ ಆಯ್ಕೆಯಾಗದೆ ಎರಡು ತಿಂಗಳಕ್ಕೂ ಹೆಚ್ಚು ದಿನಗಳು ಕಳೆದಿವೆ.  10-15 ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದ 7,000 ಕ್ಕೂ ಹೆಚ್ಚು ಉಪನ್ಯಾಸಕರನ್ನು ತಗೆದು ಹಾಕುವದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗಲಿದೆ.

ಆದೇಶವನ್ನು ಹಿಂಪಡೆದು ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದುವರಿಸಲು ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಮತ್ತು ಕರ್ನಾಟಕದಾದ್ಯಂತ ಉಗ್ರ ಹೋರಾಟಕ್ಕೆ ಸರಕಾರವೇ ನೇರ ಹೊಣೆಯಾಗುತ್ತದೆ. ಎಂದು ಮನವಿ ಮೂಲಕ ಎಚ್ಚರಿಕೆ ನೀಡಿದರು.

ರಮೇಶ ಯರಗಟ್ಟಿ, ಗುರುಶಾಂತ ಬಾಗೇವಾಡಿ, ಬಸವರಾಜ ಕರೆದೇಮಣ್ಣವರ, ರಾಯಣಗೌಡಾ ಗೌಡರ, ಡಿ.ಜಿ.ಗೋಕಾಕ, ಮಂಜುನಾಥ ಪಾಟಿಲ, ಸುಮಾ ಸಾವಂತ, ವಿಜಯಕುಮಾರ ಕಟ್ಟಿಮನಿ, ಸಂಗಮೇಶ ಹುಲಗಣ್ಣವರ, ಮೀನಾಕ್ಷಿ ವಕ್ಕುಂದಮಠ, ಪ್ರಸಾದ ವಗ್ಗಣ್ಣವರ, ಮರಿಗೌಡಾ ಚೋಬಾರಿ, ಬಸವರಾಜ ಹುಬ್ಬಳ್ಳಿ ಇದ್ದರು.

ಸುದ್ದಿ ಓದಿ