ಅಥಣಿ

ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆತ ಖಂಡಿಸಿ ; ಮಡಕೇರಿ ಚಲೋ ಕಾರ್ಯಕ್ರಮಕ್ಕೆ ಅಥಣಿ ಕಾರ್ಯಕರ್ತರು : ಬುಟಾಳಿ

ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆತ ಖಂಡಿಸಿ ; ಮಡಕೇರಿ ಚಲೋ ಕಾರ್ಯಕ್ರಮಕ್ಕೆ ಅಥಣಿ ಕಾರ್ಯಕರ್ತರು : ಬುಟಾಳಿ

ಲೋಕದರ್ಶನ ವರದಿ 


ಅಥಣಿ 23: ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಬಿಜೆಪಿ ಕ್ರಮ ಖಂಡಿಸಿ ರಾಜ್ಯ ಕಾಂಗ್ರೆಸ್ ಅಗಸ್ಟ 26ರಂದು ಹಮ್ಮಿಕೊಂಡ ಮಡಕೇರಿ ಚಲೋ ಕಾರ್ಯಕ್ರಮದಲ್ಲಿ ಅಥಣಿಯ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್‌.ಕೆ.ಬುಟಾಳಿ ತಿಳಿಸಿದರು. ಅವರು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜನ ಸಂಪರ್ಕ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  

    ಬಿಜೆಪಿ ತನ್ನ ಜನ ವಿರೋಧಿ ನೀತಿಗಳನ್ನು ತನ್ನ ಹರೀತವಾದ ಮಾತುಗಳಿಂದ ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರ ಬಾಯಿ ಮುಚ್ಚಿಸಲು ಈ ರೀತಿ ದಾಳಿ ಮಾಡಿಸುತ್ತಿದೆ ಎಂದರು. ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ಕೂಡ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸುಮ್ಮನಿರುವುದಿಲ್ಲ ಎಂದ ಅವರು 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150 ಗಳಿಗೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

    ಮಳೆ ಹಾನಿ ಪರಿಸ್ಥಿತಿಯನ್ನು ಪರೀಶೀಲಿಸಲು ಕೊಡಗಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸೂಕ್ತ ಭದ್ರತೆ ಕೊಡಬೇಕಿತ್ತು ಆದರೆ ಬಿಜೆಪಿಗೆ ಇಂತಹ ಘಟನೆ ನಡೆಯುವ ಮುನ್ಸೂಚನೆ ಇದ್ದರೂ ಕೂಡ ದುರುದ್ದೇಶದಿಂದ ಹೆಚ್ಚಿನ ಭದ್ರತೆ ನಿಯೋಜಿಸಲಿಲ್ಲ ಎಂದು ದೂರಿದರು. ಇಂತಹ ಘಟನೆಗೆ ಕಾಂಗ್ರೆಸ್ ಹೆದರದೆ ಸಮರ್ಥವಾಗಿ ಎದುರಿಸಿ ಬಿಜೆಪಿ ವೈಫಲ್ಯಗಳನ್ನು ರಾಜ್ಯದ ಜನರ ಮುಂದೆ ತರಲಿದೆ ಎಂದ ಅವರು ಮೊಟ್ಟೆ ದಾಳಿ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಮಡಕೇರಿ ಚಲೋ ಹೋರಾಟದಲ್ಲಿ ಅಥಣಿಯಿಂದಲೂ ಸಹ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ಧರಾಮಯ್ಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.  

ಹೊಳೆಪ್ಪ ಪೂಜಾರಿ, ಸಚೀನ ಬುಟಾಳಿ, ರವಿ ಬಡಕಂಬಿ, ಚಿದಾನಂದ ಮುಕಣಿ, ನೇಮಿನಾಥ ನಂದೇಶ್ವರ, ಗಜಾನನ ಗಲಬಿ, ಬಾಳು ಮುಜಾವರ, ಬೀರ​‍್ಪ ಪೂಜಾರಿ, ಬಸವರಾಜ ಸರಗರ, ಬಂದೇನವಾಜ ಮುಜಾವರ, ಮಾಂತೇಶ ಹಿರೇಮಠ, ವರದಕುಮಾರ ಬಾಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ