ನೀಡ್ಸ ಸಂಸ್ಥೆ ಸಬಾಭವನದಲ್ಲಿ ಸಮಗ್ರ ನಗರ ನಿರ್ವಹಣೆ ಚರ್ಚಾ ಸಭೆ
ಲೋಕದರ್ಶನ ವರದಿ
ರಾಣೇಬೆನ್ನೂರ 25: ಸ್ಥಳೀಯ ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್), ನಗರಸಭೆ ಹಾಗೂ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಹಾಗೂ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮದ “ಜಲಸಿರಿ” ಯೋಜನೆ ಅಡಿಯಲ್ಲಿ ಕೇಂದ್ರಿಕೃತ ಗುಂಪುಗಳ ಚರ್ಚಾ ಕಾರ್ಯಕ್ರಮವನ್ನು ನಗರದ ನೀಡ್ಸ್ ಸಭಾಭವನದಲ್ಲಿ ಇತ್ತಿಚೇಗೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ನೀಡ್ಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಫ್.ಅಕ್ಕಿ ಅವರು ನಗರದಲ್ಲಿ ಕೆಯುಐಡಿಎಫ್ಸಿ ಯೋಜನೆಯಡಿ ಈಗಾಗಲೇ 24/7 ನಿರಂತರ ನೀರು ಸರಬರಾಜು ಒಳಚರಂಡಿ ಸಂಪರ್ಕ ಹಾಗೂ ಶೌಚಾಲಯಕ್ಕೆ ಸಂಬಂಧಿಸಿದಂತೆ ನಮ್ಮ ನೀಡ್ಸ್ ಸಂಸ್ಥೆಯು ಜನರಿಗೆ ಅರಿವು ಕಾರ್ಯಕ್ರಮಗಳನ್ನು 2017ನಿಂದ ಪ್ರಾರಂಭಿಸಿ ಇಲ್ಲಿಯವರೆಗೆ ಅನುಷ್ಠಾನ ಮಾಡುತ್ತಾ ಬಂದಿದೆ. ಈಗ ಪ್ರಸ್ತುತ ನಗರದಲ್ಲಿ ಸಮುದಾಯ ಕಲ್ಯಾಣ ಗುಂಪುಗಳಿಗೆ ಹಾಗೂ ವಾರ್ಡಮಟ್ಟದ ಸಾರ್ವಜನಿಕ ತಿಳುವಳಿಕೆ ಕಾರ್ಯಕ್ರಮಗಳನ್ನು, ಕೇಂದ್ರಿಕೃತ ಗುಂಪುಗಳ ಚರ್ಚಾ ಕಾರ್ಯಕ್ರಮ, ಕರಪತ ಪತ್ರ, ಮನೆಭೇಟಿ, ಮಾಡುವುದರ ಮೂಲಕ ಯೋಜನೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಯಾವುದೇ ಯೋಜನೆಗಳು ಸಂಪೂರ್ಣವಾಗಿ ಯಶಸ್ವ ಕಾಣಬೇಕಾದರೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದ್ದು, ಸಂಸ್ಥೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ನಾಗರೀಕರು ಸರ್ವರೀತಿಯಲ್ಲಿಯು ಮುಂದಾಗುವುದರ ಮೂಲಕ ಯೋಜನೆ ಯಶಸ್ವಗೂಳಿಸಲು ಸಹಕಾರ ನೀಡಬೇಕು ಎಂದು ಅಕ್ಕಿ ಅವರು ಮನವಿ ಮಾಡಿದರು.
ಕ್ವಿಮೀಫ್ ಯೋಜನೆ ಅನುಷ್ಠಾನ ಘಟಕದ ಸಮುದಾಯ ಸಹಾಯಕ ಅಭಿವೃದ್ಧಿ ಅಧಿಕಾರಿ ಮಾರುತಿ ಪಾಟೀಲ್ ಮಾತನಾಡಿ, ಕೆಯುಐಡಿಎಫ್ಸಿ ಯೋಜನೆಯು ನಗರದಲ್ಲಿ ಸದ್ಯ ಜಾರಿಯಲ್ಲಿದ್ದು ಈ ಯೋಜನೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ, ನೀರಿನ ಜೊತೆಗೆ ಅವರ ಒಡನಾಟ ಹೆಚ್ಚಿರುತ್ತದೆ. ಆದ್ದರಿಂದ ಮಹಿಳೆಯರು ನೀರಿನ ಬಳಕೆಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ, ಮುಂದಿನ ದಿನಗಳಲ್ಲಿ ನೀರಿಗೆ ಕರವನ್ನು ನಿಗದಿ ಮಾಡುವುದರಿಂದ ಬಳಸಿದ ನೀರಿಗೆ ತಕ್ಕಂತೆ ದರವನ್ನು ಪಾವತಿಸಬೇಕಾಗುತ್ತದೆ, ಅದಕ್ಕಾಗಿ ನಗರದ ಪ್ರತಿಯೊಂದು ಮನೆ 24/7 ನಳಗಳಿಗೆ ಮೀಟರನ್ನು ಅಳವಡಿಸಲಾಗಿದೆ, ಮೀಟರನ್ನು ಸಂರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಫಲಿತಾಂಶ ಆಧಾರಿತ ನೆರವು ಶೌಚಾಲಯ ಯೋಜನಡಿಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಂಡಿರುವ ಫಲಾನುಭವಿಗಳು ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕು. ನಗರದಲ್ಲಿ ಯೋಜನೆಯೂ ಮುಗಿಯುವ ಹಂತ ತಲುಪಿದೆ ಎಂದರು.
ನಗರಸಭೆಯ ಸಿಬ್ಬಂದಿ ನವನಾಥ ಎಸ್, ನೀಡ್ಸ್ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಶಿಬಿರಾರ್ಥಿಗಳು ಮತ್ತಿತರ ಗಣ್ಯರು ಪಾಲ್ಗೂಂಡಿದ್ದರು.