ರಾಣೆಬೆನ್ನೂರ

1500ಮನೆಗಳ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವರ್ಷದೊಳಗೆ ಹಸ್ತಾಂತರ

1500ಮನೆಗಳ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವರ್ಷದೊಳಗೆ ಹಸ್ತಾಂತರ

ರಾಣಿಬೆನ್ನೂರ 09:  ನಗರವನ್ನು ಗುಡಿಸಲು ಮುಕ್ತವನ್ನಾಗಿ ಮಾಡುವ ಕನಸಿದ್ದು, ಆ ಕನ ಸನ್ನು ನನಸಾಗಿಸಲು ಈಗಾ ಗಲೇ ನಗರದಲ್ಲಿ 1500 ಕ್ಕೂ ಅಧಿಕ ಮನೆಗಳು ಮಂಜೂ ರಾತಿಯಾಗಿದ್ದು, ಈ ವರ್ಷ ದೊಳಗೆ ಮನೆಯ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿ ಗಳಿಗೆ ಹಸ್ತಾಂತರಿಸಲಾಗುವುದು ಎಂದು ಶಾಸಕ ಅರುಣಕುಮಾರ ಪೂಜಾರ ಅವರು ಹೇಳಿದರು.  

ರವಿವಾರ ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿ ಯನ್ನು ವೀಕ್ಷಿಸಿ ಮಾತನಾಡಿದರು. ನಗರಕ್ಕೆ ಮಂಜೂರಾಗಿರುವ 1500 ಮನೆಗಳಲ್ಲಿ 500ಕ್ಕೂ ಅಧಿಕ ಮನೆಗಳನ್ನು ಅಡವಿ ಆಂಜ ನೇಯ ಬಡಾವಣೆಯಲ್ಲಿ ನಿರ್ಮಿಸಲಾಗುತ್ತಿದ್ದು, ಉಳಿದವುಗಳು ನಗರದ ವಿವಿಧ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದೆ ಎಂದರು. 

ಗುಡಿಸಲುಮುಕ್ತ ನಗರವನ್ನಾಗಿ ನಿರ್ಮಿಸಲು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ​‍್ಪ, ವಸತಿ ಸಚಿವ ವಿ.ಸೋಮಣ್ಣನವರು 1500 ಮನೆಗಳನ್ನು ಒಂದೇ ಬಾರಿಗೆ ಮಂಜೂರಾತಿ ನೀಡಿ ಸಸಹಕರಿಸಿದ್ದಾರೆ. ಕ್ಷೇತ್ರದ ಜನರ ಪರವಾಗಿ ಅವರಿಗೆ ಅಭಿನಂದನ ೆಗಳನ್ನು ಸಲ್ಲಿಸುವುದಾಗಿ ಹೇಳಿದರು.  

ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸುವುದರ ಮೂಲಕ ಫಲಾನುಭವಿಗಳಿಗೆ ಹಾಗೂ ಸರ್ಕಾರಕ್ಕೆ ಉತ್ತಮ ಹೆಸರು ತರಬೇಕು. ಗುತ್ತಿಗೆದಾರರು ಯಾವುದೇ ಸಂದರ್ಭದಲ್ಲೂ ಕಳಪನಿರ್ಮಿಸಿ ಫಲಾನುಭವಿಗಳಿಗೆ ನೀಡಬೇಕಾಗಿದ್ದು, ತ್ವರಿತಗತಿಯಲ್ಲಿ ಹಾಗೂ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ಸೂಚಿಸಿದರು.  

ಬಡಾವಣೆಯ ವಿವಿಧ ಓಣಿಗಳಲ್ಲಿ ಶೀಘ್ರವೇ ಕಾಂಕ್ರೇಟ್ ರಸ್ತೆ ನಿರ್ಮಾಣ ಮಾಡಲಾಗುವುದು. ಬಡಾವಣೆಯಿಂದ ನಗರಕ್ಕೆ ತೆರಳುವ ಮುಖ್ಯ ರಸ್ತೆ ಅರ್ಧ ಭಾಗ ಡಾಂಬರೀಕರಣವಾಗಿದ್ದು ಇನ್ನುಳಿದ ರಸ್ತೆಯನ್ನು ಶೀಘ್ರವೇ ಡಾಂಬರೀಕರಣ ಗೊಳಿಸಲಾಗು ವುದು. ಮುಂದಿನ ದಿನಮಾನಗಳಲ್ಲಿ ಬಡಾವಣೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುವುದಾಗಿ ಹೇಳಿದರು. 

ನಗರಸಭಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಪೌರಾಯುಕ್ತ ಉದಯಕುಮಾರ ಬಿ.ಟಿ, ಎಇಇ ಮಹೇಶ ಕಲಾಲ, ಇಂಜಿನಿಯರ್ ದೇವರಾಜ ಜೆ.ಎಸ್, ಗುತ್ತಿಗೆದಾರ ಸುರೇಶ ಗೌಡ್ರ, ಸಿದ್ದಪ್ಪ ಚಿಕ್ಕಬಿದರಿ, ಬಸಣ್ಣ ಚಳಗೇರಿ, ಸಿದ್ದಪ್ಪ ಹಾದಿಮನಿ, ಡಿ.ಕೆ.ಹನುಮಂತಪ್ಪ, ನವನಾಥ ಸೇರಿದಂತೆ ಮತ್ತಿರರು ಇದ್ದರು. 


ಸುದ್ದಿ ಓದಿ