ಲಸಿಕಾ ಅಭಿಯಾನ ಸಂಪೂರ್ಣ ವಿಫಲ: ಪಾಟೀಲ ಆರೋಪ
ರಾಣೇಬೆನ್ನೂರು 18: ನರೇಂದ್ರ ಮೋದಿ ಹುಟ್ಟು ಹಬ್ಬದ ನಿಮಿತ್ತ ಕೈಗೊಂಡ ಲಸಿಕಾ ಅಭಿಯಾನವು ಸಂಪೂರ್ಣ ವಿಫಲವಾಗಿದೆ ಎಂದು ರವೀಂದ್ರಗೌಡ ಪಾಟೀಲ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ಹಾವೇರಿ ಜಿಲ್ಲೆಯ ಜಿಲ್ಲಾಡಳಿತ 70 ಸಾವಿರಜನರಿಗೆ ಲಸಿಕೆ ನೀಡುವಗುರಿ ಹೊಂದಿತ್ತು. ಆದರೆ ಸರ್ಕಾರ ಅನುಸರಿಸಿದ ಜನ ವಿರೋಧಿ ನೀತಿ, ಲಸಿಕೆ ಅಭಾವದಿಂದಾಗಿ ಜಿಲ್ಲಾಡಳಿತ ಗುರಿ ಮುಟ್ಟಲು ವಿಫಲಾಗಿರುವುದಕ್ಕೆ ಕಾರಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಕೆಲವು ಕೇಂದ್ರಗಳಲ್ಲಿ ಲಸಿಕೆ ಬಾರದಿರುವುದು ಕಂಡು ಬಂದಿತು. ಒಂದನೇ ಡೋಸ್ ಲಸಿಕೆ ಸರಿಯಾಗಿ ದೊರಕದೇ ಜನರು ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು ಒಂದೆಡೆ ಯಾದರೇ ಇನ್ನೂ 2ನೇ ಡೋಸ್ ಲಸಿಕೆ ಕಥೆ ಏನು? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಒಡಮೂಡಿದ್ದು, ತೋಳ ಬಂತಪೋ ತೋಳ ಎಂಬ ಕಥೆ ಸರ್ಕಾರದ್ದಾಗಿದೆ.
ಪ್ರಧಾನಿ ಮೋದಿ ಅವರುತಮ್ಮ ಹುಟ್ಟು ಹಬ್ಬದ ನಿಮಿತ್ಯರೈತ ವಿರೋಧಿ ಕೃಷಿ ಮಸೂದೆ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರದ ಬೆನ್ನೆಲುಬು ರೈತನಿಗೋಸ್ಕರ ಮರಳಿ ಪಡೆಯಬಹುದಾಗಿತ್ತು. ಆದರೆ ಮೋದಿ ಅವರು ಏರ್ ಇಂಡಿಯಾ ಕಂಪನಿಯನ್ನು ಖಾಸಗಿ ಕಂಪನಿ ಟಾಟಾ ಸನ್ಸ್ಅವರಿಗೆ ಮಾರಾಟ ಮಾಡಲು ಮುಂದಾಗಿರುವುದು ತಮ್ಮ ಜನ್ಮ ದಿನದ ಸಲುವಾಗಿ ಅವರಿಗೆ ಕೊಟ್ಟ ಉಡುಗೊರೆ ನಿಜಕ್ಕೂ ದೇಶದ ಜನರ ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.