ನಟ ಪ್ರಥಮ್ ವಿರುದ್ಧ ದೂರು ದಾಖಲು
ಬೆಂಗಳೂರು, ಆಗಸ್ಟ್ 18: ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಕುರಿತು ನಟ ಪ್ರಥಮ್ ಹಾಕಿದ್ದ ಪೋಸ್ಟ್ ಗೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ ಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಆರೋಪಿಗಳ ಸಂಬಂಧಿ ಮಹಿಳೆಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ತಮಗೆ 4 ತಿಂಗಳ ಮಗು ಹಾಗೂ 7 ತಿಂಗಳ ಮಗು ಇದೆ ಎಂದು ಹೇಳಿದ್ದರು. ಇದನ್ನು ವ್ಯಂಗ್ಯದ ಧಾಟಿಯಲ್ಲಿ ಪ್ರಥಮ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು.
ಫ್ರಥಮ್ ವಿರುದ್ಧ ಹಲಸೂರು ಗೇಟ್ ಪೋಲೀಸ್ ಠಾಣೆಯಲ್ಲಿ ಎಸ್ಡಿಪಿಐ ಸದಸ್ಯ ಅಬ್ದುಲ್ ಫಾರೂಕ್ ಎಂಬಾತ ಧಾಮರ್ಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 295 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಏಳು ತಿಂಗಳ ಹಾಗೂ ನಾಲ್ಕು ತಿಂಗಳ ಮಗು ಪಡೆಯಲು ಅಲ್ಲಾ ಪವಾಡ ಮಾಡಿರಬೇಕು ಎಂದಿದ್ದ ಪ್ರಥಮ್ 'ಇಂತಹ ಮುಗ್ಧ ಮುಸ್ಲಿಮ್ಗಳು ಅನ್ಎಜ್ಯುಕೇಟೆಡ್ ಇರಬೇಕು. ಇಲ್ಲ ಅಂದ್ರೆ ಅಲ್ಲಾ ಪವಾಡ ಮಾಡಿರಬೇಕು. 4 ತಿಂಗಳು ವ್ಯತ್ಯಾಸದಲ್ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ?' ಎಂದು ಪೋಸ್ಟ್ ಹಾಕಿದ್ದರು.
ಮುಂದುವರೆದು, '4 ತಿಂಗಳು ವ್ಯತ್ಯಾಸದಲ್ಲೇ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ? ಸೈನ್ಸ್ಗೆ ಅಸಾಧ್ಯವಾದದ್ದು ಅಲ್ಲಾಗೆ ಮಾತ್ರ ಸಾಧ್ಯ. ಖುದಾಹಾಫೀಸ್. ಸಬ್ ಅಲ್ಲಾಕ ಮೆಹರುಬಾನಿ!' ಎಂದು ಫೇಸ್ಬುಕ್ನಲ್ಲಿ ಬರೆದಿದ್ದರು ಪ್ರಥಮ್.
ತಮ್ಮ ವಿರುದ್ಧ ದೂರು ನೀಡುವ ವಿಷಯಕ್ಕೆ ಸಂಬಂಧಿಸಿ ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಪ್ರಥಮ್, ಯಾರು ಯಾರ ವಿರುದ್ಧ ಬೇಕಿದ್ದರೂ ದೂರು ನೀಡಬಹುದು. ನಾನೂ ಕೂಡ ಅಮೆರಿಕ ಅಧ್ಯಕ್ಷರ ವಿರುದ್ಧ ದೂರು ಕೊಡಬಹುದು ಎಂದಿದ್ದರು. ಹಾಗೂ ಕಮಿಷನರ್ ಜತೆ ಮಾತನಾಡುವುದಾಗಿಯೂ ತಿಳಿಸಿದ್ದರು.