ಸಮುದಾಯ ಜಾಗೃತಿ: ಬೀದಿ ನಾಟಕ ಪ್ರದರ್ಶನ
ಚಿಕ್ಕೋಡಿ 24: ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಸಮುದಾಯದಲ್ಲಿ ಬೀದಿ ನಾಟಕ ಪ್ರದರ್ಶನದಿಂದ ಕಲಾತ್ಮಕವಾಗಿ ಜನರ ಮನಸ್ಸಿಗೆ ಮುಟ್ಟುತ್ತದೆ. ವಿಶೇಷವಾಗಿ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜಾಗೃತರಾದರೆ ಆ ಕುಟುಂಬ ಆರೋಗ್ಯ ಮತ್ತು ಸಂಸ್ಕಾರದಿಂದ ಬೆಳೆಯುತ್ತದೆ ಎಂದು ವಾಳಕಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರಾಮಾ ಕಮತೆ ಮಹಿಳೆಯರಿಗೆ ಕರೆ ನೀಡಿದರು.
ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜ್ಞಾನ ವಿಕಾಸ ಮಹಿಳಾ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳಿಯ ವಿಠ್ಠಲ ರುಕ್ಮೀಣಿ ಮಂದಿರದಲ್ಲಿ ಜರುಗಿದ ಸಮುದಾಯ ಜಾಗೃತಿ ಬೀದಿನಾಟಕ ಕಾರ್ಯಕ್ರಮದಲ್ಲಿ ಅಥಿತಿಗಳು ಆಗಮಸಿ ಮಾತನಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಯಾವ್ವಾ ಇಂಗಳೆ ಜೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯ ಪಟ್ಟಣಕುಡಿ ಮೇಲ್ವಿಚಾರಕಿ ಸುಜಾತಾ ಎಮ್ ಇವರು ಮಾತನಾಡಿ ಬೀದಿನಾಟಕವನ್ನು ತಾವ ಎಲ್ಲವನ್ನು ನೋಡಿ ಅದರಲ್ಲಿನ ವಿಷಯವನ್ನು ತಿಳಿದುಕೊಂಡು ಜಾಗ್ರತರಾಗಿ ತಮ್ಮು ಕುಟುಂಬ ಕಾಪಾಡಬೆಕೆಂದು ಬಾಲ್ಯ ವಿವಾಹ ಅನಕ್ಷರತೆ ಮೂಡನಂಬಿಕೆ ಹಿಂತ ಅನಿಷ್ಟ ಪದ್ದತಗಳಿಂದ ದೂರವಿದ್ದು ಆರೋಗ್ಯ, ಶಿಕ್ಷಣ, ಸ್ವಚತೆ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕೆಂದರು.
ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಸಂಘದ ಅಧ್ಯಕ್ಷ ಗೌರಿ ತರಾಳ ವಹಿಸಿದರು. ವೇದಿಕೆ ಮೆಲೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಪ್ಪಾಣಿ ತಾಲೂಕಾ ಯೋಜಾನಾಧಿಕಾರಿ ಜಾಪಾರ ಅತ್ತಾರ, ಭರತ ಯ ಕಲಾಚಂದ್ರ, ಈರಗೌಡಾ ಈ ಕೊನಕೆ, ಸುಪ್ರೀಯಾ ಪಾಟೀಲ ಉಪಸ್ಥಿತರಿದ್ದರು.
ನಂತರ ರಂಗದರ್ಶನ ಕಲಾತಂಡ ಧುಳಗನವಾಡಿ ಇವರು “ ಬೆಲೆ ದಾಟೊನ “ ಬೀದಿನಾಟಕ ಪ್ರದರ್ಶಿಸಿ ಹೆಣ್ಣು ಮಕ್ಕಳ ಶೋಷಣೆ ತಡೆಯುವದು ಭ್ರೂಣ ಲಿಂಗ ಪತ್ತೆ ನಿಷೇಧ ಹೆಣ್ಣು ಮಕ್ಕಳ ಶಿಕ್ಷಣ ಕೊರೋನಾ ಮುಂಜಾಗೃತೆ ಕುರಿತು ಎಲ್ಲರಿಗೂ ಮನಮುಟ್ಟುವಂತೆ ಕಲಾಪ್ರದರ್ಶನ ನೀಡಿ ಅರಿವು ಮೂಡಿಸಿದರು.
ಕಲಾತಂಡದಲ್ಲಿ ಮಾರತಿ ಕಾಮಗೌಡಾ, ಸಂತ್ರಾಮ ಮಯೂರ, ಪುಂಡಲೀಕ ನಾಯಿಕ, ವಿಷ್ಣು ಹಲಗೇಕರ, ಶಂಕರ ಖೋತ, ಅಪ್ಪಾಸಾಹೇಬ ಚಿಮನೆ, ಮಾರುತಿ ಕಮತೆ, ಸಾವಿತ್ರಿ ಹಳಕಲ್ಲ, ಸುಜಾತಾ ಮಗದುಮ್ಮ, ಸುಪ್ರೀಯಾ ಕಲಾಚಂದ್ರ ಇದ್ದರು.