ಸಿದ್ದಪ್ಪ ಜೋಳದ ಅವರಿಗೆ ಶ್ಲಾಘನೀಯ ಸೇವಾ ಪ್ರಶಸ್ತಿ
ನೇಸರಗಿ 16 : ಗ್ರಾಮದ ನಿವಾಸಿ ಹಾಗೂ ಬೆಳಗಾವಿ ಕೆಎಸ್‌ಆರ್ಟಿಸಿ ವಿಭಾಗದ ಹಿರಿಯ ನಿರ್ವಾಹಕ ಸಿದ್ದಪ್ಪ ಯಲಪ್ಪ ಜೋಳದ ಅವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಸಂಸ್ಥೆಯ ವತಿಯಿಂದ ‘ಶ್ಲಾಘನೀಯ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿಯೊಂದಿಗೆ ನಗದು ಪುರಸ್ಕಾರವೂ ನೀಡಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಘಟಕದ ವ್ಯವಸ್ಥಾಪಕ ವಿನೋದ ಅಮ್ಮಣಗಿ, ತುಕಾರಾಮ ಜಟಗೊಂಡ, ನಾಗರಾಜ ಹುಲಕುಂದ ಹಾಗೂ ಕೆಎಸ್‌ಆರ್ಟಿಸಿ ಸಿಬ್ಬಂದಿ ಉಪಸ್ಥಿತರಿದ್ದರು.