ಡಾ.ಪಂ.ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವ ಆಚರಣೆ
ಮುಂಡಗೋಡ:ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀವೀರೇಶ್ವರ ಸಭಾಭವನದಲ್ಲಿ ಶ್ರೀವೀರೇಶ್ವರ ಯುವಕ ಮಂಡಳ ಚಿಗಳ್ಳಿ ಹಾಗೂ ರಂಗಭೂಮಿ ಕಲಾಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಗಾನಯೋಗಿ ಡಾ.ಪಂ.ಪುಟ್ಟರಾಜ ಗವಾಯಿಗಳ 12ನೇ ಪುಣ್ಯ ಸ್ಮರಣೋತ್ಸವ ಆಚರಿಸಲಾಯಿತು.
ಬೆಳಗ್ಗೆ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಭವ್ಯ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಂಜೆ ಭಕ್ತಿ ಸಂಗೀತ ಕಾರ್ಯಕ್ರಮ ನಂತರ ಅನ್ನಸಂತರೆ್ಣ ಕಾರ್ಯಕ್ರಮ ಜರುಗಿತು. ಈ ವೇಳೆ ಸಿದ್ದು ಮುಂಡಗೋಡ, ರಾಜಶೇಖರ ಹಿರೇಮಠ, ರವಿಕಾಂತ ಆಲದಕಟ್ಟಿ, ಗೀರೀಶ ಕಾತೂರ, ಗೀರೀಶ ಕೆರಿಮನಿ, ಚನ್ನಯ್ಯಾ ಅಸುಂಡಿಮಠ, ಚಂದ್ರಶೇಖರ ತಳವಾರ, ಮಹದೇವಪ್ಪಾ ಬೈಲವಾಳ, ಮಹದೇವಪ್ಪಾ ಅರಳಿಕಟ್ಟಿ, ಮೋಹನ ಜಾಧವ, ಮಲ್ಲಿಕಾರ್ಜುನ ರಾಣೆಬೆನ್ನೂರ, ಎಚ್.ಆರ್.ಚೂಡಾಮಣಿ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.