ಸಂವಿಧಾನವನ್ನು ಕಂಕಣ ಬದ್ಧರಾಗಿ ಸಂರಕ್ಷಣೆಗೆ ಮುಂದಾಗಲಿ: ರತ್ನಾಕರ್
ಕುಷ್ಟಗಿ 23: ಸಂವಿಧಾನವನ್ನು ಕಂಕಣ ಬದ್ಧರಾಗಿ ರಕ್ಷಣೆ ಮಾಡವ ಹಿನ್ನೆಲೆಯಲ್ಲಿ ಈ ಸಂವಿಧಾನ ಸಂರಕ್ಷಣಾ ಸಮಾವೇಶವನ್ನು ಏರಿ್ಡಸಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ವೇದಿಕೆ ಆಯೋಜಕ ಟಿ. ರತ್ನಾಕರ್ ಹೇಳಿದರು.
ಸಂವಿಧಾನ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಏರಿ್ಡಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ವಿರೋಧಿ ಚಟುವಟಿಕೆಗಳು ರಾಜ್ಯದಲ್ಲಿ ಏತೇಚ್ಛವಾಗಿ ನಡೆಯುತ್ತಿವೆ ಅವುಗಳನ್ನು ಹತೋಟಿಗೆ ತರಲು ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.
ರಾಯಚೂರಿನಲ್ಲಿ ನಡೆದ ಸಂವಿಧಾನ ವಿರೋಧಿ ಘಟನೆಯ ಹಿನ್ನೆಲೆಯಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಭಾಗದ ಜನರನ್ನು ವಿಶ್ವಾಸಕ್ಕೆ ಪಡೆದು ಕುಷ್ಟಗಿಯಲ್ಲಿ ಬೃಹತ್ ಮಟ್ಟದ ಸಂವಿಧಾನ ಸಂರಕ್ಷಣಾ ಸಮಾವೇಶವನ್ನು ಆಯೋಜಿಸಲಾಗಿದೆ.
ಸರ್ವರಿಗೂ ಸಮಬಾಳು ಸಮಪಾಲು ಎಂಬ ದೇಹ ಉದ್ದೇಶದಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂವಿಧಾನ ರಕ್ಷಣೆ ಮಾಡುವ ನಿಟ್ಟಿನಲ್ಲಿ ದೃಡ ಸಂಕಲ್ಪ ಹೊಂದಬೇಕು ಎಂದು ಹೇಳಿದರು.
ಸುಖರಾಜ ತಾಳಕೇರಿ ಮಾತನಾಡಿ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ಪ್ರತಿಯೊಬ್ಬ ಜನಪ್ರತಿನಿಧಿಗಳು ಸಂವಿಧಾನ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ಬೆಂಗಳೂರಿನ ಮಹಿಳಾ ಹೋರಾಟಗಾರ್ತಿ ಡಾ. ಎಚ್. ಎಸ್. ಅನುಪಮ ಅವರು ವಿಶೇಷವಾಗಿ ಉಪನ್ಯಾಸ ನೀಡುವರು.
ಈ ಸಂವಿಧಾನ ರಕ್ಷಣಾ ಸಮಾವೇಶ ಪಕ್ಷಾತೀತವಾಗಿ ಆಯೋಜಿಸಲಾಗಿದೆ ಯಾರು ಅನ್ಯತಾ ಭಾವಿಸಬಾರದು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಮಣ್ಣ ಕಲ್ಲನವರ, ಮಾಲತಿ ನಾಯಕ, ಮೈನುದ್ದೀನ್ ಮುಲ್ಲಾ, ಕೊಪ್ಪಳ ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್ , ಮುತ್ತುರಾಜ್ ಕುಷ್ಟಗಿ, ಶಿವಮೂರ್ತಿ ಗುತ್ತೂರ, ಹನುಮೇಶ ಕಡೇಮನಿ, ಶಿವಪುತ್ರ್ಪ ಗುಮಗೇರಿ ಉಪಸ್ಥಿತರಿದ್ದರು.