ಎಲಬುರ್ಗ

ಯುವಕರು ಸ್ವ ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿ: ಶ್ರೀಶೈಲ ತಳವಾರ್

ಯುವಕರು ಸ್ವ ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿ: ಶ್ರೀಶೈಲ ತಳವಾರ್

ಲೋಕದರ್ಶನ ವರದಿ  

ಯಲಬುರ್ಗಾ 05: ಇಂದು ಎಲ್ಲೇಡೆ ರಕ್ತದ ಅಭಾವ ಕಂಡು ಬರುತ್ತಿದ್ದು, ಯುವಕರು ಸ್ವ ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಿ ಇನ್ನೋಬರ ಜೀವ ಉಳಿಸುವ ಪ್ರಯತ್ನ ಮಾಡಬೇಕು ಎಂದು ತಾಲೂಕು ದಂಡಾಧಿಕಾರಿ ಶ್ರೀಶೈಲ್ ತಳವಾರ ಹೇಳಿದರು.  


ಪಟ್ಟಣದ ಮಗ್ಗಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ಇನ್ನರ್ವೀಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ. ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  


ವಿಶೇಷವಾಗಿ ಮಕ್ಕಳಲ್ಲಿ, ಮಹಿಳೆಯರಲ್ಲಿ ರಕ್ತರ ಕೊರತೆವುಂಟಾಗಿ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಬೇಡಿಕೆಗನುಗುಣವಾಗಿ ರಕ್ತದ ಲಭ್ಯತೆಯಿಲ್ಲದಿರುವುದರಿಂದ ಅವಶ್ಯಕತೆಯಿರುವವರು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಮೇಲಿಂದ ಮೇಲೆ ರಕ್ತದಾನ ಶಿಬಿರ ಏರಿ​‍್ಡಸಿ ರಕ್ತದ ಅಭಾವ ನೀಗಿಸಬೇಕು ಎಂದು ಹೇಳಿದರು. ಶರೀಫ್ ಸಾಬ್ ಕೊತ್ವಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.  


ಈ ಸಂದರ್ಭದಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ಸೋಮಶೇಖರ ಅಳವಂಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಚೇರ್ಮನ್ ಡಾ. ಶಿವನಗೌಡ ದಾನರೆಡ್ಡಿ, ವೈಸ್ ಚೇರ್ ಮನ್ ಡಾ. ಶಿವಕುಮಾರ್ ದಿವಟರ್, ತಾಲೂಕು ಸಾರ್ವಜನಿಕರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿ.ಪ್ರಕಾಶ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪಲ್ಲೇದ, ಡಾ.ಸಂಗಣಬಸಪ್ಪ, ಡಾ.ಶೇಖರ್ ಬಜಂತ್ರಿ, ಡಾ.ಬಿ.ಹುನಗುಂದ, ಡಾ. ನವೀನಕುಮಾರ್ ಕರಂಡಿ, ಶ್ರೀನಿವಾಸ ಹ್ಯಾಟಿ,  ದೇವಸ್ಥಾನ ಕಮಿಟಿ ಅಧ್ಯಕ್ಷರು ಅಮರ​‍್ಪ ಕಲಬುರ್ಗಿ, ಪಪಂ ಅಧ್ಯಕ್ಷ ಅಂಬರೀಶ್ ಹುಬ್ಬಳ್ಳಿ, ಪಪಂ  ಸದಸ್ಯ ಬಸಲಿಂಗಪ್ಪ ಕೊತ್ತಲ, ಸದಸ್ಯೆ ಡಾ.ನಂದಿತಾ ದಾನರೆಡ್ಡಿ, ಬಸವರಾಜ್ ಅಧಿಕಾರಿ, ಷಣ್ಮುಖಪ್ಪ ರಾಂಪುರ, ಶರಣಪ್ಪ ಗಾಂಜಿ, ದಾನನಗೌಡ ತೊಂಡಿಹಾಳ, ರವಿ ಗುರಡ್ಡಿ, ಮಲ್ಲಿಕಾರ್ಜುನ ನರೇಗಲ್, ಮಲ್ಲಿಕಾರ್ಜುನ ಜಕ್ಕಲಿ, ಕಲ್ಲನಗೌಡ ಓಜನಹಳ್ಳಿ, ಪತ್ರಕರ್ತರು ಸೇರಿ ಇತರರಿದ್ದರು. 


ಸುದ್ದಿ ಓದಿ