ಕುಸಿದ ಭತ್ತದ ಬೆಲೆ: ಖರೀದಿ ಹೆಸರಿಗೆ ಮಾತ್ರ ಬೆಂಬಲ ಬೆಲೆ
ಸಿರುಗುಪ್ಪ 16: ರೈತರ ಆದಾಯ ದ್ವಿಗುಣ ಗೊಳಿಸುವುದಾಗಿ ಹೇಳುತ್ತಿರುವ ಸರ್ಕಾರಗಳು ಮಾರುಕಟ್ಟೆಯಲ್ಲಿ ಬೆಲೆಗಳು ಕುಸಿತವಾದರೂ ನೆರವಿಗೆ ಬರುತ್ತಿಲ್ಲ ಬೆಂಬಲ ಬೆಲೆ ಖರೀದಿ ಹೆಸರಿನಲ್ಲಿ ಪ್ರಜಾ ಪೂರ್ವಕವಾಗಿ ಆಗುತ್ತಿರುವ ವಂಚನೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಭತ್ತದ ಬೆಲೆ ಗಣನೀಯ ಇಳಿಕೆಯಾಗಿ ರೈತರು ಕಂಗಾಲಾಗಿದ್ದಾರೆ ಎಂದು ಜನಾಭಿಪ್ರಾಯ ಮುಖಂಡ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಿಳಿಸಿದರು.
ಭತ್ತ ಹೆಚ್ಚಾಗಿ ಬೆಳೆಯುವ ತುಂಗಭದ್ರಾ ಅಚ್ಚುಕಟ್ಟು ಬಲದಂಡೆ ಎಡದಂಡೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕದ ಸ್ಥಿತಿಯನ್ನು ಎದುರಿಸುವಂತಾಗಿದೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ನಡೆಯುತ್ತಿಲ್ಲ ನಿಗದಿ ಮಾಡಿದ ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಮಾರಾಟ ಮಾಡಿದರೂ ರಾಜ್ಯ ಸರ್ಕಾರ ಮಧ್ಯಪ್ರವೇಶಿಸದೆ ಇರುವದು ಕೈ ಸುಟ್ಟುಕೊಳ್ಳುವ ಸ್ಥಿತಿ ಭತ್ತ ಬೆಳೆ ರೈತ ರದ್ದಾಗಿದೆ ಸರ್ಕಾರ ಹುಸಿ ಭರವಸೆಯಲ್ಲಿ ರೈತ ಆಸೆಗೆ ತಣ್ಣೀರೆಚಿಸಿದೆ ಬೆಂಬಲ ಬೆಲೆಗೆ ಕಾನೂನಾತ್ಮಕ ಬೆಲೆ ಇಲ್ಲದೆ ಇರುವುದರಿಂದ ಬೆಲೆ ಸಿಗದಂತಾಗಿದೆ ರೈತರ ಸಂಕಷ್ಟಗಳನ್ನು ದೂರ ಮಾಡುವ ಕೆಲಸ ಮಾಡಬೇಕಿದೆ ಜಿಲ್ಲೆಯ ಜನ ಪ್ರತಿನಿಧಿಗಳು ಸರ್ಕಾರದ ಮೇಲೆ ಮತ್ತೆ ಮತ್ತೆ ಒತ್ತಡ ಹಾಕುವ ಮೂಲಕ ರೈತರಿಗೆ ನ್ಯಾಯಒದಗಿಸಬೇಕಿದೆ ಎಂದು ರೈತರ ಪರ ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.