ಓಮನ್ ಚಾಂಡಿ ಕುರಿತ ‘ಕಾಫಿ ಟೇಬಲ್ ಪುಸ್ತಕ’ ಕರಪತ್ರ ಬಿಡುಗಡೆ
ತಿರುವನಂತಪುರಂ, ಆಗುಸ್ಟ್ 26: ಮಾಜಿ ಮುಖ್ಯಮಂತ್ರಿ ಓಮನ್
ಚಾಂಡಿ ಕುರಿತ ‘ಕಾಫಿ ಟೇಬಲ್ ಪುಸ್ತಕ’ ದ ಕರಪತ್ರ ಬಿಡುಗಡೆಯಾಗಿದೆ.
ಎರಡು ಬಾರಿ ಕೇರಳ ಮುಖ್ಯಮಂತ್ರಿಯಾಗಿ, ಮುಂದಿನ ಅಕ್ಟೋಬರ್ ಗೆ ಶಾಸಕರಾಗಿ 50 ವರ್ಷಗಳನ್ನು ಪೂರೈಸು ದಾಖಲೆ ಪುಸ್ತಕವನ್ನು ಸೇರುವ ಸಂದರ್ಭದಲ್ಲಿ, ಕೇರಳ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಕರಪತ್ರ ಬಿಡುಗಡೆಗೊಳಿಸಲಾಗಿದೆ.
ಕೊಟ್ಟಾಯಂ ಜಿಲ್ಲೆಯ ಪುತ್ತುಪಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇರಳ ಕಾಂಗ್ರೆಸ್ ನ ಜನಪ್ರಿಯ ನಾಯಕ ಎನಿಸಿಕೊಂಡಿರುವ ಚಾಂಡಿ ಅವರ ಪುಸ್ತಕವನ್ನು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಮಂಗಳವಾರ ಸಂಜೆ ಬಿಡುಗಡೆಗೊಳಿಸಿದ್ದಾರೆ.