ಗ್ರಾಮೀಣ ಕಲೆಗಳ ಬೆಳವಣಿಗೆಗೆ ಸಹಕಾರ ಅಗತ್ಯ :ವೆಂಕಟೇಶ್

ಗ್ರಾಮೀಣ ಕಲೆಗಳ ಬೆಳವಣಿಗೆಗೆ ಸಹಕಾರ ಅಗತ್ಯ :ವೆಂಕಟೇಶ್

ಬಳ್ಳಾರಿ 05: ಜನಪದ ಸಂಸ್ಕೃತಿ0ುನ್ನು ಇಂದಿನ 0ುುವ ಪೀಳಿಗೆಗೆ ಪರಿಚಯಿಸಲು ಬ0ುಲಾಟ ಮೊದಲಾದ ಗ್ರಾಮೀಣ ಕಲೆಗಳು ಅಗತ್ಯ. ಇದಕ್ಕೆ ಎಲ್ಲರ ಸಹಕಾರ ಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ವೆಂಕಟೇಶ್ ಪ್ರಸಾದ್ ತಿಳಿಸಿದರು. ದೇವಿಶ್ರೀ ಸಾಂಸ್ಕೃತಿಕ ಬ0ುಲಾಟ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶ್ರೀಮತಿ ಸುಜಾತಮ್ಮ ಮತ್ತು ತಂಡದವರಿಂದ ಹಮ್ಮಿಕೊಂಡಿದ್ದ ರಾಮಾ0ುಣ ಬ0ುಲಾಟ ಪ್ರದರ್ಶನ ಕಾ0ರ್ುಕ್ರಮ ಉದ್ಘಾಟಿಸಿ ಮಾತನಾಡಿದರು. ನಗರ ಪ್ರದೇಶದಲ್ಲಿ ಟಿವಿ ಮಾಧ್ಯಮದಿಂದಾಗಿ ರಂಗ ಕಲೆಗಳನ್ನು ಆಸ್ವಾದಿಸುವುದು ಕಡಿಮೆ0ಾಗುತ್ತಾ ಬರುತ್ತದೆ. ಆದರೆ, ಇಂದಿಗೂ ಹಳ್ಳಿಗಳಲ್ಲಿ ಬೆಳಗಿನ ಜಾವದವರೆಗೆ ಬ0ುಲಾಟ ಪ್ರದರ್ಶನಗಳನ್ನು ಜನರು ವೀಕ್ಷಿಸಿ, ಪ್ರೋತ್ಸಾಹಿಸುತ್ತಿರುವುದರಿಂದ ಇಂದಿಗೂ ಈ ಕಲೆ ಉಳಿದುಕೊಂಡು ಬಂದಿದೆ. ಗಂಡು ಕಲೆ0ಾದ ಈ ಬ0ುಲಾಟ ಪ್ರದರ್ಶನದಲ್ಲಿ ಪಾತ್ರಗಳ ಆಂಗೀಕ ಚಲನೆ ಮತ್ತು ಸಂಭಾಷಣೆ ಆಕರ್ಷಕವಾಗಿತ್ತು. ಇಂತಹ ಪ್ರದರ್ಶನಗಳನ್ನು ಹೆಚ್ಚಾಗಿ ಪ್ರದಶರ್ಿಸಲು ಸರಕಾರ ಮತ್ತು ಕಲಾ ಪ್ರೇಮಿಗಳು ಹೆಚ್ಚಿನ ಬೆಂಬಲ ನೀಡಬೇಕು ಎಂದರು.  ಹಿರಿ0ು ಪತ್ರಕರ್ತ ಎನ್.ವೀರಭದ್ರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ದೊಡ್ಡಾಟ ಜನ್ಮ ನೀಡಿದ್ದು, ನಮ್ಮ ಬಳ್ಳಾರಿ ಜಿಲ್ಲೆ. ಇಂತಹ ಕಲೆ ಈ ಹಿಂದೆ 0ುಕ್ಷಗಾನ ಅಕಾಡೆಮಿ0ುಲ್ಲಿ ಸೇರಿದ್ದರಿಂದ ಹೆಚ್ಚಿನ ಪ್ರೋತ್ಸಾಹ ಇರಲಿಲ್ಲ. ಈಗ ಬ0ುಲಾಟಕ್ಕೆ ಪ್ರತ್ಯೇಕ ಅಕಾಡೆಮಿ ರಚನೆ0ಾಗಿರುವುದರಿಂದ ಸರಕಾರದಿಂದ ಹೆಚ್ಚಿನ ನೆರವು ದೊರೆ0ುುತ್ತದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ0ುಲ್ಲಿ ಈ ಪ್ರಕಾರದಲ್ಲಿ ಇಬ್ಬರು ಕಲಾವಿದರಿಗೆ ಪ್ರಶಸ್ತಿ ದೊರೆತಿರುವುದು ಪ್ರಶಂಸನೀ0ು ಎಂದರು. ರಂಗಭೂಮಿ ಕಲಾವಿದೆ ಸುಜಾತಮ್ಮ ರಂಗಗೀತೆ ಹಾಡುವ ಮೂಲಕ ಗಮನ ಸೆಳೆದರು. ಕಾಂಗ್ರೆಸ್ ಮುಖಂಡರಾದ ಬೆಣಕಲ್ಲು ಸುರೇಶ್, ಮೋಕಾ ಗೋವಿಂದಪ್ಪ, ಸಿಂಧುವಾಳ ಗಾದಿಲಿಂಗನಗೌಡ, ನಾರಾ0ುಣ ಸ್ವಾಮಿ, ಬಿ.ಲಕ್ಷ್ಮಿನಾರಾ0ುಣ ಮೊದಲಾದವರು ವೇದಿಕೆ0ುಲ್ಲಿದ್ದರು. ಅಮಾತಿ ಬಸವರಾಜ ಕಾ0ರ್ುಕ್ರಮ ನಿರೂಪಿಸಿದರು. ಎರ್ರೆಮ್ಮ ಪ್ರಾಥರ್ಿಸಿದರು. ನಂತರ ರಂಗಭೂಮಿ ಕಲಾವಿದೆ ಸುಜಾತಮ್ಮ ತಂಡದಿಂದ ರಾಮಾ0ುಣ ಬ0ುಲಾಟ ಪ್ರದರ್ಶನ ನಡೆಯಿತು. ಬಾಲಕೃಷ್ಣನ ಪಾತ್ರದಲ್ಲಿ ಕೆ.ಎಂ.ಅಜ0್ ಕುಮಾರಸ್ವಾಮಿ, ರಾಮನ ಪಾತ್ರದಲ್ಲಿ ಗೋನಾಳ ವೀರಬಸಪ್ಪ, ಲಕ್ಷ್ಮಣನ ಪಾತ್ರದಲ್ಲಿ ಬೆಣಕಲ್ಲು ಚೆನ್ನಪ್ಪಗೌಡ, ರಾವಣನ ಪಾತ್ರದಲ್ಲಿ ಬೊಮ್ಮನಾಳ್ ಬಸವನಗೌಡ, ಸೀತೆ ಪಾತ್ರದಲ್ಲಿ ವಿರುಪಾಪುರ ನಾಗರತ್ನಮ್ಮ, ಮಂಡೋದರಿ ಮತ್ತು ಮಾ0ುಸ್ತ್ರೀ ಪಾತ್ರದಲ್ಲಿ ಶಾರದಾ ಅಭಿನಯಿಸಿದರು. ಸಾರಥಿ0ಾಗಿ ವದ್ದಟ್ಟಿ ಕರಿಬಸಪ್ಪ, ಬಂಡಿಹಟ್ಟಿ ಹನುಮಾವಧೂತ ಹಾಮರ್ೊನಿ0ುಂ ನುಡಿಸಿದರು.

ಸುದ್ದಿ ಓದಿ