ಗ್ರಾಹಕರಿಗೆ ನಂಬಿಕೆ, ವಿಶ್ವಾಸ ಮೂಡಿದಾಗ ಸಹಕಾರಿ ಸಂಸ್ಥೆಗಳು ಬೆಳವಣಿಗೆಯಾಗುತ್ತವೆ: ಕಂಬಾಳಿಮಠ
ಶಿಗ್ಗಾವಿ 29: ಯಾವುದೇ ಸಹಕಾರಿ ಸಂಸ್ಥೆಯಾಗಲಿ ಗ್ರಾಹಕರ ಮತ್ತು ಸಿಬ್ಬಂದಿಗಳ ಮದ್ಯ ನಂಬಿಕೆ, ವಿಶ್ವಾಸ ಮೂಡಿದಾಗ ಅಂತಹ ಸಹಕಾರಿ ಸಂಸ್ಥೆಗಳು ಬೆಳವಣಿಗೆಯಾಗಲು ಸಾದ್ಯವಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕ್ರೇಡಿಟ್ ಕೋಆಫ್ ಸೊಸೈಟಿಯಲ್ಲಿ ನಡೆದ 6 ನೇ ವರ್ಷದ ವಾರ್ಷಿಕ ಮಹಾಸಭೆಯನ್ನ ಉದ್ಘಾಟಿಸಿ ಮಾತನಾಡಿದ ಅವರು, ಸಮಾನ ಮನಸ್ಕರ ಸಂಸ್ಥೆಯಾಗಿ ಬೆಳವಣಿಗೆಯಾಗಲು ಸದಸ್ಯರ ಶ್ರಮ ಹಾಗೂ ಸಿಬ್ಬಂದಿಗಳ ಹೊಂದಾಣಿಕೆಯಿಂದ ಮಾತ್ರ ಸಾದ್ಯ, ಅದು ಸಹಕಾರಿ ಸಂಸ್ಥೆ ಬೆಳವಣಿಗೆಗೆ ಮುಖ್ಯ ಕಾರಣ, ಪ್ರಮುಖವಾಗಿ ಸಾಲದ ಮರುಪಾವತಿಗೆ ಹೆಚ್ಚು ಗಮನ ಹರಿಸಿ ಉತ್ತಮ ಗುರಿ ಇಟ್ಟು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಪ್ರಯತ್ನಿಸಿದಾಗ ಸಂಸ್ಥೆಯ ಬೆಳವಣಿಗೆ ಸಾಧ್ಯವಿದೆ ಎಂದರು.
ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮಾತನಾಡಿ, ಸರ್ವ ಸದಸ್ಯರ ಹೊಂದಾಣಿಕೆ ಹಾಗೂ ವಿಶ್ವಾಸ ಮುಖ್ಯವಾಗಿದೆ, ಗ್ರಾಹಕರ ಸಾಲ ಮರುಪಾವತಿಗೆ ಹೆಚ್ಚು ಗಮನ ಹರಿಸಿ ಎಂದು ಸದಸ್ಯರಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಜೊತೆ ಉತ್ತಮ ವ್ಯವಹಾರವುಳ್ಳ ಗ್ರಾಹಕರನ್ನು ಹಾಗೂ ಬ್ಯಾಂಕಿನ ಸಿಬ್ಬಂದಿಗಳನ್ನ ಸನ್ಮಾನಿಸಲಾಯಿತು.
ಪುರಸಭೆ ಉಪಾದ್ಯಕ್ಷೆ ಶಾಂತಾಬಾಯಿ ಸುಬೇದಾರ, ಶ್ರೀ ಹಡಪದ ಅಪ್ಪಣ್ಣ ಕ್ರೇಡಿಟ್ ಕೋ-ಆಫ್ ಸೋಸೈಟಿ ಅದ್ಯಕ್ಷ ಮಹಾಲಿಂಗಪ್ಪ ಹಡಪದ, ಉಪಾದ್ಯಕ್ಷ ವಿಶ್ವನಾಥ ಬಂಡಿವಡ್ಡರ, ನಿಕಟಪೂರ್ವ ಅದ್ಯಕ್ಷ ಮುತ್ತುರಾಜ ಕ್ಷೌರದ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅದ್ಯಕ್ಷ ಮಲ್ಲಿಕಾರ್ಜುನ ಹಡಪದ, ಸದಸ್ಯರಾದ ಶಿವಕುಮಾರ ಮಡ್ಲಿಕರ, ಸಿದ್ದಪ್ಪ ಗಂಜೀಗಟ್ಟಿ, ಶಿವರಾಜ ಕ್ಷೌರದ, ಈರಣ್ಣ ಯಲಿಗಾರ, ಬಸವರಾಜ ಜಂಗಳಿ, ಬಸವರಾಜ ಹಡಪದ, ರವಿ ಹಡಪದ, ಶೋಭಾ ಮಡ್ಲಿಕರ, ಮಲ್ಲವ್ವ ಹಡಪದ, ವ್ಯವಸ್ಥಾಪಕಿ ನಯನಾ ಮರಿಲಿಂಗಣ್ಣವರ, ಸಿಬ್ಬಂದಿಗಳಾದ ಪ್ರೇಮಾ ನಾವಿ, ಚೇತನ ಕೊರವರ, ಮಂಜುನಾಥ ಓಣಿಮನಿ, ಸದಾನಂದ ಸೇರಿದಂತೆ ಸೊಸೈಟಿಯ ಗ್ರಾಹಕರು ಇದ್ದರು.