ತುಂಗಾಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ
ಹೊಸಪೇಟೆ(ವಿಜಯನಗರ) 02: ವಿಜಯನಗರ ಜಿಲ್ಲೆಯ ಹೊಸಪೇಟೆಯ ಪ್ರಾದೇಶಿಕ ಅರಣ್ಯವಲಯದ ವತಿಯಿಂದ “ವಿಶ್ವ ಪರಿಸರ ದಿನ”ದ ಅಂಗವಾಗಿ ಸ್ವಚ್ಛತಾ ಮತ್ತು ಹಸೀರೀಕರಣ ಅಭಿಯಾನದ ನಿಮಿತ್ತ ಗುರುವಾರ ತುಂಗಭದ್ರಾ ನದಿಯ ಹಿನ್ನೀರಿನ ಪ್ರದೇಶ ಗುಂಡಾ ಟ್ರೀ ಪಾರ್ಕ್ ಹತ್ತಿರ ರೋಟರಿ ಕ್ಲಬ್ನ ಹಾಗೂ ಗ್ರೀನ್ ಹೊಸಪೇಟೆ ಸಂಘಟನೆಗಳ ಸಹಯೋಗದೊಂದಿಗೆ ತುಂಗಭದ್ರಾ ನದಿಯ ಹಿನ್ನೀರಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಲೇವಾರಿ ಮಾಡಲಾಯಿತು.
ಗುಂಡಾ ಸಸ್ಯೋಧ್ಯಾನವನದಲ್ಲಿ ಗಿಡಗಳನ್ನು ನೆಡುವ ಮೂಲಕ ಗುಂಡಾ ಹಸೀರೀಕರಣ ಅಭಿಯಾನ ಕಾರ್ಯಕ್ರಮಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹೊಸಪೇಟೆಯ ಪ್ರಾದೇಶಿಕ ಅರಣ್ಯವಲಯದ ಅರಣ್ಯಾಧಿಕಾರಿ ಕೆ.ಸಿ.ವಿನಯ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಹೊಸಪೇಟೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ.ಜಿ, ಹೊಸಪೇಟೆ ಹಾಗೂ ದರೋಜಿ ಅರಣ್ಯ ಸಿಬ್ಬಂದಿಗಳು, ರೋಟರಿ ಕ್ಲಬ್ನ ಸದಸ್ಯರು ಹಾಗೂ ಗ್ರೀನ್ ಹೊಸಪೇಟೆ ಸದಸ್ಯರು ಸೇರಿದಂತೆ ಇನ್ನೀತರರು ಭಾಗವಹಿಸಿದ್ದರು.