ಬ್ರಿಟಿಷರ ಕಾಲದ ಕಾಲುವೆ ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ
ಲೋಕದರ್ಶನ ವರದಿ
ಸಂಬರಗಿ 25: ಅಜುರ ಗ್ರಾಮದ ಬಳಿ ಇರುವ ಬ್ರಿಟಿಷರ ಕಾಲದ ಕಾಲುವೆಯನ್ನು ಶಾಸಕ ಶ್ರೀಮಂತ ಪಾಟೀಲ 2 ಬಾರಿ ವೀಕ್ಷಣೆ ಮಾಡಿ ಮಿನಿ ಬಸವೇಶ್ವರ ಏತ ನೀರಾವರಿ ಯೋಜನೆ ನಾಮಕರಣ ಮಾಡಿ ಗಡಿ ಭಾಗದ ರೈತರಿಗೆ ಕೊಟ್ಟ ಮಾತಿನಂತೆ ಒಂದು ವಾರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಮಹಾರಾಷ್ಟ್ರದ ಕರ್ಲಟಿ ಗ್ರಾಮದಿಂದಾ ಬಾಂದಾರ ಕಾಲುವೆ ಮುಖಾಂತರ ಬರುವ ನೀರಿನಿಂದ ರೈತರಿಗೆ ಗಡಿ ಗ್ರಾಮಕ್ಕೆ ಅನುಕೂಲವಾಗಿದೆ. ಕಾಲುವೆ ಸ್ವಚ್ಛಗೊಳಿಸಿ ಪುನರ್ ಆರಂಭ ಗೊಳಿಸಿ ಗಡಿಭಾಗದ 12 ಗ್ರಾಮಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಅವರರನ್ನು ಈ ಭಾಗದ ರೈತರು ಅಭಿನಂದಿಸುತ್ತಿದ್ದಾರೆ.
ಈ ನೀರು ಅಜುರ, ನಾಗನುರ ಪಿಎ, ತಾವಂಶಿ, ಸಂಬರಗಿ, ಕಲೋತ್ತಿ, ಶಿವನುರ ಸೇರಿದಂತೆ ಈ ಭಾಗದ ನೂರಾರು ಎಕರೆ ಜಮೀನಿಗೆ ನೀರು ಒದಗಿಸಲಾಗಿದೆ.
ಮುಖಂಡರಾದ ದಾದಾ ಶಿಂಧೆ, .ಖಿಳೇಗಾಂವ
ಗ್ರಾಮ ಪಂಚಾಯತ ಅಧ್ಯಕ್ಷ ಧರೆಪ್ಪಾ ಹೊನ್ನಾಗೋಳ, ಮಲಾಬಾದ ಗ್ರಾಮ ಪಂಚಾಯತ ಅಧ್ಯಕ್ಷ ಬಿರಾಪ್ಪಾ ಉಗಾರೆ, ಅನಂತಪೂರ ಗ್ರಾಮ ಪಂಚಾಯತ ಅಧ್ಯಕ್ಷ ಮಹೇಶ ಹಬಗುಂಡೆ, ರಾಮನ್ನಾ ಸೊಡ್ಡಿ, ಅಬ್ದುಲ ಮುಲ್ಲಾ, ಶಂಕರ ದೊಡ್ಡಾನಾವರ ಇವರ ಸತತ ಪ್ರಯತ್ನದಿಂದ ಬರಪೀಡಿತ ಪ್ರದೇಶಗಳಲ್ಲಿ ನೀರು ಹರಿದು ಭೂಮಿ ಹಸಿರಾಗುವಂತಾಗಿದೆ