ರಾಷ್ಟ್ರೀಯ

27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

27 ದಿನಗಳ ಗೇಮಿಂಗ್ ಟೂರ್ನಮೆಂಟ್‌ ಗಾಗಿ ಕ್ಲಾಷ್ ರಾಯಲ್ ಜೊತೆಯಾದ ಜಿಯೋ

ಮುಂಬೈ, ಡಿಸೆಂಬರ್.1:  ಜಿಯೋ ಗೇಮ್ಸ್ 27 ದಿನಗಳ ಕ್ಲಾಷ್ ರಾಯಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ವಿಜೇತರಿಗೆ ‘ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್’ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕ್ಲಾಷ್ ರಾಯಲ್ ಒಂದು ಫ್ರೀಮಿಯಮ್, ನೈಜ-ಸಮಯ, ಮಲ್ಟಿಪ್ಲೇಯರ್ ಸ್ಟ್ರಾಟಜಿ ವಿಡಿಯೋ ಗೇಮ್ ಆಗಿದ್ದು, ಇದರಲ್ಲಿ ರಾಯಲ್ಸ್, ಕ್ಲಾಷ್ ಮತ್ತು ಹೆಚ್ಚಿನ ಪಾತ್ರಗಳನ್ನು ಕಾಣಬಹುದಾಗಿದೆ.  ಕ್ಲಾಷ್ ಆಫ್ ಕ್ಲಾನ್ಸ್ ಟ್ರೂಪ್ಸ್, ಸ್ಪೇಲ್ಸ್‌ ಮತ್ತು ಡಿಫೆನ್ಸಸ್ಸ್ ಗಳಿದ್ದು, ರಾಯಲ್ ಫ್ರಿನ್ಸಸ್, ನೈಟ್ಸ್, ಬೇಬಿ ಡ್ರಾಗನ್ಸ್ ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಡಜನ್ ಗಟ್ಟಲೆ ಕಾರ್ಡ್‌ಗಳನ್ನು ಸಂಗ್ರಹಿಸಿ ಮತ್ತು ನವೀಕರಿಸಬಹುದಾಗಿದೆ.

ಜಿಯೋ ಗೇಮ್ಸ್ ಕ್ಲಾಷ್ ರಾಯಲ್ ಪಂದ್ಯಾವಳಿ, ಸೂಪರ್‌ ಸೆಲ್ ಸಹಯೋಗದೊಂದಿಗೆ ನಡೆಯಲಿದೆ.  ಇಲ್ಲಿ ನೀವು ಸ್ಪರ್ಧಿಸಿ, ನಿಮ್ಮ ಕೌಶಲ್ಯಗಳನ್ನು ಪರೀಕ್ಷಿಸಿ ಮತ್ತು ಕಾರ್ಯತಂತ್ರದಿಂದ ಜಯಗಳಿಸಬಹುದಾಗಿದೆ . ನವೆಂಬರ್ 28 ರಿಂದ ಆರಂಭಗೊಂಡಿದ್ದು, ಡಿಸೆಂಬರ್ 25 ರವರೆಗೆ ನಡೆಯಲಿರುವ 27 ದಿನಗಳ ಪಂದ್ಯಾವಳಿಯು ಪ್ರತಿ ಗೇಮರ್‌ಗೆ ವಿವಿಧ ಹಂತದ ಪರಿಣತಿಯನ್ನು ಹೊಂದಿದೆ - ಆರಂಭಿಕರು, ಹವ್ಯಾಸಿಗಳು ಮತ್ತು ಪ್ರೋ-ಗೇಮರುಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಪಂದ್ಯಾವಳಿಯ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ಭಾಗವಹಿಸುವವರು ‘1-ವರ್ಸಸ್ -1 ಪಂದ್ಯಗಳಲ್ಲಿ’ ಗರಿಷ್ಠ ಗೆಲುವುಗಳನ್ನು ಗಳಿಸಬೇಕಾಗುತ್ತದೆ, ಅಲ್ಲಿ ವಿಜೇತರು ಆಕರ್ಷಕ ಸಾಪ್ತಾಹಿಕ ಕೊಡುಗೆಗಳ ಜೊತೆಗೆ ದೊಡ್ಡ ನಗದು ಬಹುಮಾನಗಳನ್ನು ಗೆಲ್ಲಬಹುದು.

ಪಂದ್ಯಾವಳಿಯಲ್ಲಿ ಭಾಗವಹಿಸಲು ಗೇಮರ್ ಗಳು ಮತ್ತು ಉತ್ಸಾಹಿಗಳು https://play.jiogames.com/clashroyale ನಲ್ಲಿ ನೋಂದಾಯಿಸಿಕೊಳ್ಳಬಹುದು. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಜಿಯೋಟಿವಿಯಲ್ಲಿ ಸ್ಟ್ರೀಮ್ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿ ಓದಿ