ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರಿಂದ ಕ್ರಿಸ್ಮಸ್ ಹಬ್ಬ ಆಚರಣೆ
ಸಿರುಗುಪ್ಪ26: ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರು ಸಂಭ್ರಮದಿಂದ ಕ್ರಿಸ್ಮಸ್ ಹಬ್ಬ ಆಚರಿಸಿದರು ನಗರದ ಎಸ್ ಐ ಬೇರ್ಷೆಬ್, ಬೇತೆಲ್ ,ಕಲ್ವರಿ , ಲಿಟಲ್ ಫ್ಲವರ್ ಚರ್ಚ್ ಗಳು ಸೇರಿದಂತೆ ತಾಲೂಕಿನ ಎಲ್ಲಾ ಚರ್ಚ್ ಗಳಲ್ಲಿ ಕ್ರೈಸ್ತ ಸಮುದಾಯವರಿಂದ ಪ್ರಾರ್ಥನೆ ಕ್ರಿಸ್ಮಸ್ ಅಂಗವಾಗಿ ವಿದ್ಯುತ್ ದೀಪಾಲಂಕಾರ ಶಾಂತಿದೂತ ಬಾಲು ಯೇಸುವಿನ ಆಕೃತಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು ನವ ವಸ್ತ್ರಾಲಂಕಾರದಿಂದ ದೈವಿಸೇವಕರು ಪಾಸ್ಟರ್ ಗಳು ಸೇರಿ ಚರ್ಚ್ ನ ಸಭಾಂಗಣದಲ್ಲಿ ಆವರಣದಲ್ಲಿ ಸುವಾರ್ತೆಗಳೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮೇಣದಬತ್ತಿ ಹಚ್ಚಿ ಜಗತ್ತಿಗೆ ಹರಡಿಕೊಂಡಿರುವ ಕರೋನ ರೋಗದಿಂದ ಮುಕ್ತಿ ದೊರೆಯ ಲೆಂದು ಪ್ರಾರ್ಥಿಸಿದರು . ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಮನೆಯಲ್ಲಿ ತಯಾರಿಸಿದ ವಿಶೇಷ ಸಿಹಿ ತಿಂಡಿಗಳನ್ನು ಹಂಚಿಕೊಂಡರು ಯೇಸು ಪ್ರಭುವಿನ ಜನ್ಮದಿನದ ಆಕೃತಿ ನಕ್ಷತ್ರ ವಿವಿಧ ರೀತಿಯಿಂದ ಸಿಂಗರಿಸಲಾಗಿತ್ತು ಕ್ರಿಸ್ಮಸ್ ಟ್ರೀ ವೀಕ್ಷಕರ ಗಮನ ಸೆಳೆದವು ಎಂದು ಸಮಾಜ ಸುಧಾರಕ ಸಾಕ್ಷರತಾ ಅಬ್ದುಲ್ ನಬಿ ತಿಳಿಸಿದರು ನಗರದ ಬೈಪಾಸ್ ರಸ್ತೆಯ ಹತ್ತಿರ ಚೆನೈ ಮೂಲದ ಚರ್ಚ್ ಫಾದರ್ ಶಮೀಸ್ ಅವರು ಕೇಕ್ ಕತ್ತರಿಸಿ ಕ್ರಿಸ್ಮಸ್ ಆಚರಿಸಿ ಶಾಂತಿ ದೂತನಾದ ಯೇಸು ಪ್ರಭು ಎಲ್ಲರಿಗೂ ಒಳಿತು ಮಾಡಲೆಂದು ಪ್ರಾರ್ಥಿಸಿದರು ಕರೆ ಬಂಡೆ ವ್ಯಾಪಾರಿ ನಾಗೇಶ ಸಾರ್ವಜನಿಕರಿಗೆ ಅನ್ನ ಸಂತರೆ್ಣ ಪ್ರಸಾದ ಸರ್ವರಿಗೂ ಏರಿ್ಡಸಿದ್ದರು.