ಕಿರುಬಸ್ ನಿಲ್ದಾಣ ನಿರ್ಮಾಣಕ್ಕೆ ಚೋಪ್ರಾ ಒತ್ತಾಯ
ಲೋಕದರ್ಶನ ವರದಿ
ಮುಂಡರಗಿ 09: ಪಟ್ಟಣದ ಕೊಪ್ಪಳ ವೃತ್ತ ಹಾಗೂ ನೂತನ ಎಪಿಎಂಸಿ ಬಳಿ ಪ್ರಯಾಣಿಕರ ಹಿತ ದೃಷ್ಟಿಯಿಂದ ಕಿರುಬಸ್ ನಿಲ್ದಾಣ ನಿರ್ಮಿಸಬೇಕು. ಆ ಮೂಲಕ ಪ್ರಯಾಣಿಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಎಪಿಎಂಸಿ ವರ್ತಕ ಹಾಗೂ ಯುವಸೇವಾ ಸಂಘಟನೆಯ ಅಧ್ಯಕ್ಷ ಪವನ್ ಚೋಪ್ರಾ ಒತ್ತಾಯಿಸಿದ್ದಾರೆ.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ವೃತ್ತ ಹಾಗೂ ಕೇಂದ್ರ ಬಸ್ನಿಲ್ದಾಣಗಳಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿದ್ದು, ಅಲ್ಲಿ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಅರಭಾವಿ-ಚೆಳ್ಳಕೇರಿ ಹೆದ್ದಾರಿ ನಿರ್ಮಾಣಕ್ಕೂ ಮೊದಲು ಕೊಪ್ಪಳ ವೃತ್ತದಲ್ಲಿ ಕಿರುಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ರಸ್ತೆ ಅಗಲೀಕರಣ ಸಂದರ್ಭದಲ್ಲಿ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಇದರಿಂದಾಗಿ ಗದಗ ಹಾಗೂ ಕೊಪ್ಪಳ ಪಟ್ಟಣಗಳಿಗೆ ಸುಮಾರು 20ರಿಂದ30 ಗ್ರಾಮಗಳಿಂದ ತೆರಳುವ ಸಾವಿರಾರು ಪ್ರಯಾಣಿಕರು ಪ್ರತಿ ನಿತ್ಯ ಮಳೆ ಹಾಗೂ ಬಿಸಿಲಿನಲ್ಲಿ ನಿಲ್ಲಬೇಕಾಗಿದೆ ಎಂದು ತಿಳಿಸಿದರು.
ಪಟ್ಟಣದ ನೂತನ ಎಪಿಎಂಸಿಯು ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 2.5ಕಿ.ಮೀ. ದೂರದಲ್ಲಿದೆ. ರೈತರು ಅಲ್ಲಿಗೆ ಹೋಗಿ ಬರಲು ಸಮಸ್ಯೆ ಯಾಗುತ್ತಿದೆ. ಆದ್ದರಿಂದ ಎಪಿಎಂಸಿ ಬಳಿ ಕಿರುಬಸ್ ನಿಲ್ದಾಣ ನಿರ್ಮಿಸಿ ಬಸ್ ಕ ನಿಲುಗಡೆಗೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇದರಿಂದ ರೈತರಿಗೆ ಅನುಕೂಲ ವಾಗಲಿದೆ ಎಂದು ತಿಳಿಸಿದ್ದಾರೆ.