ಕನ್ನಡ ಸಂಸ್ಕ್ರತಿ ಬಿಂಬಿಸಿದ ಸ್ನೇಹದೀಪ ಮಕ್ಕಳು
ಲೋಕದರ್ಶನ ವರದಿ
ರಾಣೇಬೆನ್ನೂರು 10: ಇಲ್ಲಿನ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗ ಮಂದಿರದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಪ್ರತಿಬಿಂಬಿತ ಸಾಂಸ್ಕ್ರತಿ ಕಾರ್ಯಕ್ರಮಗಳು ಇತ್ತಿಚೇಗೆ ನಡೆಯಿತು. ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯ 30ಕ್ಕೂ ಹೆಚ್ಚು ಅಂದ ಮಕ್ಕಳು ತಮ್ಮ ಸಾಂಸ್ಕ್ರತಿಕ ಪ್ರತಿಬೆ ಮೇರೆದು ನುಡಿ ಸಂಸ್ಕ್ರತಿಗೆ ಮೇರಗೂ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಅರುಣಕುಮಾರ ಪೂಜಾರ ಅವರು ಉದ್ಘಾಟಿಸಿ ಚಾಲನೆ ನೀಡಿದರು. ವಿಧ್ಯಾರ್ಥಿಗಳು ನಿರಂತರ 100 ನಿಮಿಷಗಳ ಕಾಲ ಕನ್ನಡ ರಾಜ್ಯೋತ್ಸವ ಗೀತೆಗಳನ್ನು ಹಾಡುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ತಾಲ್ಲೂಕಾ ದಂಡಾದಿಕಾರಿ ಶಂಕರ ಜಿ.ಎಸ್. ನಗರಸಭೆ ಪೌರಾಯುಕ್ತ ಉದಯಕುಮಾರ .ಬಿ.ಟಿ., ಸಂಸ್ಥೆಯ ಧರ್ಮದರ್ಶಿ ಕೆ.ಜಿ.ಮೋಹನ್, ಸ್ವಾಕರವೆ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ವಿಜಯಲಕ್ಷ್ಮಿ ಮುಂಡಾಸದ, ನವೀನ್ ಕುಳೇನೂರು, ಯೋಗೇಶ ಭವಾನಿಶಂಕರ, ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.