ಮಕ್ಕಳನ್ನು ರನ್ನ ಮಷಿನ್ಗಳಂತೆ ಕಾಣಬಾರದು: ಪ್ರಾಚಾರ್ಯ ಹಾವೇರಿ
ಶಿಗ್ಗಾವಿ 18: ಪಾಲಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಹೊರತು ಅವರನ್ನು ರನ್ನ ಮಷಿನ್ ಗಳಂತೆ ಕಾಣಬಾರದು ಎಂದು ಪ್ರಾಚಾರ್ಯ ಎಸ್.ಹೆಚ್. ಹಾವೇರಿ ಹೇಳಿದರು. ಪಟ್ಟಣದ ಕುನ್ನೂರ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳಿಗೆ ಪ್ರೀತಿ ವಿಶ್ವಾಸದಿಂದ ಮಾತ್ರ ಅವರ ಮನಸ್ಸು ಗೆಲ್ಲಬಹುದೆ ಹೊರತು ಅವರನ್ನು ದ್ವೇಷದಿಂದ ಕಾಣಬಹುದಾದ ಬಹಳ ಪ್ರಸಂಗಗಳು ಬಂದೊಂದುಗುತ್ತವೆ ಎಂದರು.
ಹಿರಿಯ ಶಿಕ್ಷಕ ಡಿ.ಬಿ.ಶಿರೂರ ಮಾತನಾಡಿ ಇಂದಿನ ಮಕ್ಕಳಿಗೆ ಅವಕಾಶಗಳು ಬಹಳ ಇದ್ದಾವೆ ಆದರೆ ಪ್ರಯತ್ನವಿಲ್ಲ ಆದ್ದರಿಂದಎಲ್ಲ ಮಕ್ಕಳು ಸಹಿತ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಪಾಲಕ ಹನುಮಂತ ಬಂಡಿವಡ್ಡರ ಮಾತನಾಡಿ ಬಡತನ ಪರಿಸ್ಥಿತಿ ಎಲ್ಲರೀತಿಯ ಅನುಭವವನ್ನು ನೀಡುತ್ತದೆ ಆದ್ದರಿಂದ ಪ್ರತಿಯೊಬ್ಬ ಮಕ್ಕಳು ಸಹಿತ ಪ್ರಾಮಾಣಿಕವಾಗಿ ಸ್ವಂತ ಬಲದಿಂದ ಮುಂದೆ ಬರಬೇಕು ಎಂದು ಹೇಳಿದರು.
ವಿಧ್ಯಾರ್ಥಿ ಮಂಜುನಾಥ ಮಾತನಾಡಿ ಇಂದು ಎಲ್ಲ ಶಿಕ್ಷಕರು ಸೇರಿಅವರೆ ಹಣವನ್ನು ಹಾಕಿ ಮಕ್ಕಳ ದಿನಾಚರಣೆ ಮಾಡುತ್ತಿರುವುದು ತಾಲೂಕಿನ ಎಲ್ಲ ಶಾಲೆಗಳಿಗೆ ಮಾದರಿ ಎಂದರು. ಅಧ್ಯಕ್ಷತೆ ಹಾಗೂ ಅತಿಥಿ ಸ್ಥಾನವನ್ನು ವಿಧ್ಯಾರ್ಥಿಗಳು ಅಲಂಕರಿಸಿದ್ದರು. ಈ ಸಂದರ್ಭದಲ್ಲಿ ಆದರ್ಶ ವಿದ್ಯಾರ್ಥಿಗಳಾದ ಮಂಜುನಾಥ ಆರೇರ ಹಾಗೂ ತ್ರಿವೇಣಿ ಪಾಟೀಲ ರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಲಾವಣ್ಯ ಸೋಮಸಾಗರ ಸ್ವಾಗತಿಸಿದರೆ, ಸುನೀತಾಕಮ್ಮಾರ ವಂದಿಸಿದರು, ಪವಿತ್ರಾ ಕಿರೆಸೂರ ಕಾರ್ಯಕ್ರಮ ನಿರ್ವಹಿಸಿದರು.