ಮಕ್ಕಳು ಆಟ- ಪಾಠ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆಯಬೇಕು: ಅನ್ನಪೂರ್ಣಮ್ಮ
ರಾಣೆಬೆನ್ನೂರು 19: ಜವಾಹರಲಾಲ್ ನೆಹರು ಜಿ ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ ಕಾಳಜಿ ಹೊಂದಿದ್ದರು ಎಂದು ಶಿಶು ವಿಹಾರ ಮಹಿಳಾ ಸಮಾಜದ ಅಧ್ಯಕ್ಷ ಶ್ರೀಮತಿ ಅನ್ನಪೂರ್ಣಮ್ಮ ದಾನಪ್ಪನವರ್ ಹೇಳಿದರು. ಅವರು ಇಲ್ಲಿನ ಅಶೋಕ ವೃತ್ತದ ಮಹಿಳಾ ಸಮಾಜ ಸಭಾಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಬಾಲ್ಯದಲ್ಲಿ ಮಾನಸಿಕ, ದೈಹಿಕ, ಬೌದ್ಧಿಕ ಬೆಳವಣಿಗೆ ಹೊಂದಬೇಕಾದರೆ ಆಟ ಪಾಠದ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆಯಬೇಕು ಅಂದಾಗ ಮಾತ್ರ ಭವಿಷ್ಯದಲ್ಲಿ ಅವರು ಪರಿಪೂರ್ಣ ಶಿಕ್ಷಣ ಪಡೆದು ಪ್ರಭುದ್ಧರಾಗಲು ಸಾಧ್ಯವಾಗುವುದು, ಈ ನಿಟ್ಟಿನಲ್ಲಿ ಪಾಲಕರು ಗಮನಹರಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗೀತಾ ಜಂಬಿಗಿ, ಕಾರ್ಯದರ್ಶಿ ರತ್ನ ಮೋಹನ್ ಪುನೀತ್, ಖಜಾಂಚಿ ಗಾಯಿತ್ರಮ್ಮ ಕುರುವತ್ತಿ, ಸದಸ್ಯರಾದ ಶಕುಂತಲಮ್ಮ ಜಂಬಗಿ, ಲಕ್ಷ್ಮಿ ದೇವಗಿರಿ, ಸುನಂದಮ್ಮ ಕುರುವತ್ತಿ ಪುಷ್ಪಾ ಶಿವಲಿಂಗಪ್ಪ, ಸೇರಿದಂತೆ ಮತ್ತಿತರ ಸದಸ್ಯರು, ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪಧರ್ೆಗಳನ್ನು ಆಯೂಜಿಸಲಾಗಿತ್ತು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು