ರಾಣೆಬೆನ್ನೂರ

ಮಕ್ಕಳು ಸಾಂಸ್ಕೃತಿಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ಕೊಟ್ರೇಶ್

ಮಕ್ಕಳು ಸಾಂಸ್ಕೃತಿಕವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು: ಕೊಟ್ರೇಶ್

ರಾಣೇಬೆನ್ನೂರು 11:  ಇಂದಿನ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾದರೆ ವಿದ್ಯಾರ್ಜನೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ನಿರೂಪಿಸಿಕೊಳ್ಳಲು ಮುಂದಾಗಬೇಕಾದ ಅಗತ್ಯವಿದೆ ಎಂದು ಆರ್ ಟಿ ಇ ಎಸ್ ಬಿಎಡ್ ಕಾಲೇಜು ಪ್ರಾಚಾರ್ಯ ಕೊಟ್ರೇಶ್ ಬಸಾಪುರ್ ಹೇಳಿದರು. ಅವರು ಇಲ್ಲಿನ ಮೆಡ್ಲೇರಿ ರಸ್ತೆ ಎಂ. ಜಿ.ಶಿಕ್ಷಣ ಸಂಸ್ಥೆಯ, ಲಯನ್ಸ್‌ ಶಾಲಾ  ಭವನದಲ್ಲಿ, ಸ್ವಾತಂತ್ರೋತ್ಸವದ ನಿಮಿತ್ತ ಆಯೋಜಿಸಿದ್ದ, ತಾಲೂಕ ಮಟ್ಟದ ದೇಶಭಕ್ತಿ, ಚಿತ್ರಕಲೆ, ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.   ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ಶಾಲಾ, ತಾಲೂಕ,  ವಲಯ ಮಟ್ಟದಲ್ಲಿ ಸ್ಪರ್ಧೆಗಳು ಆಯೋಜಿಸಿ ಅವರಲ್ಲಿರುವ ಆಂತರಿಕ ಪ್ರತಿಭೆ ಹೊರ ಸೂಸಲು ಮುಂದಾಗಬೇಕಾದ ಅಗತ್ಯವಿದೆ ಎಂದರು.  

ಅಧ್ಯಕ್ಷತೆ ವಹಿಸಿದ್ದ, ಲಯನ್ಸ್‌ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಭು ಲಿಂಗಪ್ಪ ಹಲಗೇರಿ ಅವರು, ಶಿಕ್ಷಣ ಸಂಸ್ಥೆ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಮತ್ತು ಅವರಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಇತಿಹಾಸದಿಂದಲೂ ಮುಂದಿದೆ ಎಂದರು. ಕಾರ್ಯಕ್ರಮದಲ್ಲಿ ಎಂ.ಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ, ಮಾಜಿ ಅಧ್ಯಕ್ಷರಾದ ಎಲ್ ಜಿ ಶೆಟ್ರ, ಅಶೋಕ ಹೊಟ್ಟಿಗೌಡ್ರ, ಜೆಟ್ಟಪ್ಪ ಕರೇಗೌಡ್ರ, ಬಸವರಾಜ ಬಡಿಗೇರ್, ಶಿವಾನಂದ ಸಂಗಾಪುರ, ಗುತ್ತೆಪ್ಪ ಹಳೆಮನಿ, ಜಯಣ್ಣ ಮುಚಡಿ, ಸೇರಿದಂತೆ ಮತ್ತಿತರ ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಸೃಷ್ಟಿ ಬನಶ್ರೀ ಸಂಗಡಿಗರು  ಪ್ರಾರ್ಥಿಸಿದರು. ಶಿಕ್ಷಕ ಆರ್‌. ವಿ. ಸುರಗೊಂಡ, ಸ್ವಾಗತಿಸಿ ನಿರೂಪಿಸಿದರು. ಎಸ್‌ಎಂ ಎಳೇಹೊಳೆ ವಂದಿಸಿದರು. ತಾಲೂಕ ಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವಿಧ ಪ್ರೌಢಶಾಲೆಗಳ 150ಕ್ಕೆ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಸಾಂಸ್ಕೃತಿಕ ಪ್ರತಿಭೆ ಮೇರೆದರು. ಸ್ಪರ್ಧಾ ವಿಜೇತರಿಗೆ ಸಮಾರೋಪದಲ್ಲಿ ಬಹುಮಾನ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. 


ಸುದ್ದಿ ಓದಿ