ಮಕ್ಕಳಿಗೆ ಸಮರ್ಪಕವಾಗಿ ಅವಕಾಶ ಕಲ್ಪಿಸಬೇಕು: ನ್ಯಾಯಾಧೀಶೆ ನಿವೇದಿತಾ.
ಸೇವಾ ಅಂಧರ ಸಂಸ್ಥೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ.
ರಾಣೇಬೆನ್ನೂರು 09: ವಿಕಲಚೇತನರಲ್ಲಿ ವಿಶೇಷವಾದ ಜ್ಞಾನ ಅಡಗಿರುತ್ತವೆ. ವಿಕಲತೆ ಎನ್ನುವುದು ಪಾಪವೂ ಅಲ್ಲ, ಶಾಪವು ಅಲ್ಲ. ಮೂಡನಂಬಿಕೆಗಳನ್ನು ಇಟ್ಟುಕೂಳ್ಳದೆ ಪಾಲಕರು ಅವರಿಗೆ ಸರಿಯಾದ ರೀತಿಯಲ್ಲಿ ಪಾಲನೆ ಪೋಷಣೆ ಮಾಡಿದರೆ ಅವರು ಸಹ ಸಮಾಜದಲ್ಲಿ ಇತರರಂತೆ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು 2ನೇ ಹಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶೆ ಶ್ರೀಮತಿ ನಿವೇದಿತಾ ಎಂ. ಮುನವಳ್ಳಿಮಠ ಹೇಳಿದರು.
ಅವರು ಇತ್ತೀಚೆಗೆ ಮಾರುತಿ ನಗರದ ಸೇವಾ ಅಂದರ ಸಂಸ್ಥೆಯ ಶ್ರೀ ರೇಣುಕಾ ಎಲ್ಲಮ್ಮ ಕಿವುಡ, ಮೂಕ ಮಕ್ಕಳ ವಸತಿ ಶಾಲೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘವು ಆಯೋಜಿಸಿದ್ದ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ರೀತಿಯ ಸೌಲಭ್ಯ ನೀಡುವುದರ ಜೊತೆಗೆ ಅವರು ಸಮಾನತೆಯಿಂದ ಬುದುಕನ್ನು ಸಾಗಿಸುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೂಳಿಸಿದೆ ಎಂದ ಅವರು ವಿಕಲಚೇತನರ ಸೇವೆಯು ಭಗವಂತನ ಸೇವೆಯಾಗಿದೆ. ಸಂಸ್ಥೆಯ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅಥಿತಿಯಾಗಿ ಪಾಲ್ಗೂಂಡಿದ್ದ ನ್ಯಾಯವಾದಿ ನಂದಿನಿ ಜೋಶಿ, ಅವರು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಿತ್ಯ ನಿರಂತರ ಶೋಷಣೆಗಳು ನಡೆಯುತ್ತಿವೆ. ಕಾನೂನು ಎಷ್ಟೇ ಪ್ರಭಲವಾಗಿದ್ದರೂ ಸಹ ಇದರಿಂದ ನುಣಿಚಿಕೂಳ್ಳುವ ಘಟನೆಗಳು ನಡೆಯುತ್ತಿರುವುದು ವಿಷಾಧಕರ ಸಂಗತಿಯಾಗಿದೆ ಎಂದ ಅವರು ಮಕ್ಕಳಿಗೆ ಬಾಲ್ಯದಲ್ಲಿಯೇ ಸುರಕ್ಷಿತ, ಅಸುರಕ್ಷಿತ ಸ್ಪರ್ಶ ಜ್ಞಾನದ ಕುರಿತು ತಿಳುವಳಿಕೆ ನೀಡುವುದರ ಮೂಲಕ ಜಾಗೃತಿಗೂಳಿಸಬೇಕಾದ ಬಹು ಅಗತ್ಯವಿದೆ. ಯಾವುದೇ ರೀತಿಯಲ್ಲಿ ಸಮಸ್ಯೆಗಳು ಉಂಟಾದರೇ ಕೋಡಲೇ ಮಕ್ಕಳ ಸಹಾಯವಾಣಿ- 1098 ಗೆ ಕರೆ ಮಾಡಿ ಪರಿಹಾರಕಂಡುಕೊಳ್ಳಬಹುದಾಗಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ನ್ಯಾಯವಾಧಿ ಅನುಪಮಾ ಎನ್ ಕಣವಿ, ಅವರು ವಿಕಲಚೇತನರಿಗೆ ಸರ್ಕಾರದಿಂದ ದೂರೆಯುವ ಸೌಲತ್ತುಗಳ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಕಿ ಸೌಮ್ಯಾ ಎಸ್.ಆರ್ ಅವರು ಸೇವಾ ಅಂದರ ಸಂಸ್ಥೆಯು ಕಳೆದ 35 ವರ್ಷಗಳ ಹಿಂದೆ ಆರಂಭವಾಗಿದ್ದು, ಇದರ ಪ್ರಗತಿ ಮತ್ತು ಅಭಿವೃದ್ಧಿಗೆ ಸಂಸ್ಥೆಯ ಯೋಜನಾಧಿಕಾರಿ ಹೆಚ್.ಆರ್ ಶಿವಕುಮಾರ ಅವರು ಸಾಕಷ್ಟು ಶ್ರಮಿಸಿದವರಾಗಿದ್ದಾರೆ. ಅನೇಕ ಕಷ್ಟ ನಷ್ಟಗಳನ್ನು ಎದುರಿಸಿ ಇಂದು ಪ್ರಗತಿಯ ಹಂತದಲ್ಲಿ ಸಾಗುತ್ತಲಿದೆ ಎಂದ ಅವರು ಸರ್ಕಾರದ ಎಲ್ಲ ಯೋಜನೆಗಳ ಮೂಲಕ ಮಕ್ಕಳ ಸರ್ವಾಂಗಿಣ ಅಭಿವೃದ್ದಿಗೆ ತನ್ನ ಸೇವೆ ಸಲ್ಲಿಸುತ್ತಲಿದೆ. ಮಕ್ಕಳ ಸೇವೆಯಲ್ಲಿ ಹಗಲಿರುಳು ಇಲ್ಲಿನ ಆಡಳಿತ ಮಂಡಳಿ ಮತ್ತು ಶಾಲೆಯ ಶಿಕ್ಷಕರು ಸದಾಕಾಲ ಸೇವೆಯಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದೇವೆ. ನಮ್ಮ ಪಾಲಿಗೆ ಭಗವಂತನು ನೀಡಿದ ಕಾಯಕವೆಂದು ಭಾವಿಸಿ ಕಾಯಾ ವಾಚಾ ಮನಸಾ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಎಂದರು.
ವಕೀಲರ ಸಂಘ ಅಧ್ಯಕ್ಷ ಬಿ.ಹೆಚ್. ಬುರಡಿಕಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಜಿ. ಕೆ. ಮುಂಡಾಸದ, ಉಪಾಧ್ಯಕ್ಷ ಕುಮಾರ ಡಿ ಮಡಿವಾಳರ, ನ್ಯಾಯವಾಧಿ ಹೆಚ್.ಎಸ್,. ಸಿದ್ದಪ್ಪನವರ, ಸೇರಿದಂತೆ ಸಂಘದ ಅನೇಕ ಸದಸ್ಯರು ಗಣ್ಯರು ಉಪಸ್ಥಿತರಿದ್ದರು. ನೇತ್ರಾವತಿ ಮಗ್ಗದ ಪ್ರಾರ್ಥಿಸಿದರು. ಶಿವರಾಜ ಗಂಗಣ್ಣನವರ ಸ್ವಾಗತಿಸಿದರು. ಭವಾನಿ, ಎಸ್, ಬಣಕಾರ ನಿರೂಪಿಸಿ ವಂದಿಸಿದರು.