ಮಕ್ಕಳು ದೇಶದ ಭಾವಿ ನಾಗರಿಕರು
ಶಿಗ್ಗಾವಿ 07: ಮಕ್ಕಳು ದೇಶದ ಭಾವಿ ನಾಗರಿಕರು ಅವರನ್ನು ಉತ್ತಮ ಮಾರ್ಗದರ್ಶನ ನೀಡಿ ರೂಪಿಸುವವರೇ ಶಿಕ್ಷಕರು ಹಾಗಾಗಿ ಶಿಕ್ಷಕರ ಕಾರ್ಯ ಶ್ಲಾಘನೀಯವಾಗಿದೆ ಅದಕ್ಕೆ ಮಹತ್ವ ಕೊಡುವ ಉದ್ದೇಶದಿಂದ ಶಿಕ್ಷಕರ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ ಎಂದು ಪ್ರಾರ್ಚಾಯ ಎಸ್.ಎಚ್.ಹಾವೇರಿ ಹೇಳಿದರು.
ಪಟ್ಟಣದ ಕುನ್ನೂರ ಇಂಟರ್ನ್ಯಾಷನಲ್ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ನಿಮಿತ್ಯ ಭಾವಚಿತ್ರಕ್ಕೆ ಪುರ್ಷ್ಪಾಣೆ ಸಲ್ಲಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಣಕ್ಕೆ ರಾಷ್ಟ್ರ ನಿರ್ಮಾಣ ಮಾಡುವ ಶಕ್ತಿ ಇದೆ. ಅದರ ಮಹಾತ್ಕಾರ್ಯದ ಸೃಷ್ಟಿಕರ್ತ ಶಿಕ್ಷಕ ವೃತ್ತಿಯಾಗಿದೆ ಆ ಉದ್ದೇಶಗಳನ್ನು ನಿರ್ವಹಿಸುತ್ತಿದ್ದೇವೆಯೇ ಎನ್ನುವುದನ್ನು ಇಂದಿನ ಶಿಕ್ಷಕರು ಅವಲೋಕನ ಮಾಡಿಕೊಳ್ಳಬೇಕು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಇರಬೇಕು ಅಲ್ಲದೇ ಕಾರುಣ್ಯದ ಬೆಳಕು ಚಲ್ಲುವ ಶಿಕ್ಷಕರ ಸಂಖ್ಯೆ ಹೆಚ್ಚಾಗಬೇಕು. ಮಕ್ಕಳೊಂದಿಗೆ ಮಗುವಾಗಿ, ಗುರುವಾಗಿ ಹೃದಯದ ಭಾಷೆಯನ್ನು ಕಟ್ಟಿಕೊಡುವ ಶಿಕ್ಷಕರಾಗಬೇಕು ಎಲ್ಲ ಸಾಧಕರ ಹಿಂದೆ ಶಿಕ್ಷಕರದು ಪ್ರಮುಖ ಪಾತ್ರವಿದೆ ಎಂದರು.
ಶಿಕ್ಷಕ ಮಾರುತಿ ತಳವಾರ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನವನ್ನು ವಿಕಾಸ ಮಾಡುವುದು ಮತ್ತು ಮೌಲ್ಯಗಳನ್ನು ರೂಡಿಸಿಕೊಂಡು ಆ ಮೌಲ್ಯಾಧಾರಿತ ಗುಣಗಳನ್ನು ಅವರಲ್ಲಿ ಬಿತ್ತರಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ಮಹತ್ವದ್ದಾಗಿದ್ದು ಅದು ಶಿಕ್ಷಕ ವೃತ್ತಿಯಾಗಿದೆ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಶ್ರದ್ದೆ, ತಾಳ್ಮೆಯಿಂದ ಸರಿ ತಪ್ಪುಗಳನ್ನು ತಿದ್ದುವ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದರು.
ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳು ಕೇಕ ಕತ್ತರಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿ ನಂತರ ಶಿಕ್ಷಕರಿಗೆ ಎಲ್ಲ ವಿಧ್ಯಾರ್ಥಿಗಳು ಮತ್ತು ಮಕ್ಕಳು ವಿವಿಧ ಆಟೋಟಗಳನ್ನು ಏರಿ್ಡಸಿ ಅವರಿಗೆ ಪ್ರಶಸ್ತಿಗಳನ್ನು ನೀಡಿ ನಂತರ ಸಂತೋಷಕೂಟವನ್ನು ಏರಿ್ಡಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದದವರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.