ಸಿಂಧಗಿ

ಕ್ರಿಯೇಟಿವ್ ಕಿಡ್ಸ್‌ ಹೋಮ್ ಪೂರ್ವಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಆಚರಿಸಲಾಯಿತು

ಕ್ರಿಯೇಟಿವ್ ಕಿಡ್ಸ್‌ ಹೋಮ್ ಪೂರ್ವಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಆಚರಿಸಲಾಯಿತು

ಕ್ರಿಯೇಟಿವ್ ಕಿಡ್ಸ್‌ ಹೋಮ್ ಪೂರ್ವಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಆಚರಿಸಲಾಯಿತು. 

ಸಿಂದಗಿ 15 : ಭಾರತದಲ್ಲಿ ಪ್ರತಿವರ್ಷ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಮಕ್ಕಳ ದಿನಾಚರಣೆ ಮಾಡುವ ಮೂಲಕ ಅವರ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಪಟ್ಟಣದ ವೈದ್ಯೆ ಡಾ.ರಾಜೇಶ್ವರಿ ಮನಗೂಳಿ ಹೇಳಿದರು. 

     ಗುರುವಾರ, ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್‌ ಹೋಮ್ ಪೂರ್ವಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನೆಹರು ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಕಾರ್ಯಕ್ರಮದಂದು ಸಾಮಾನ್ಯವಾಗಿ ಪುಸ್ತಕಗಳು, ಆಹಾರ, ಚಾಕೊಲೇಟ್‌ಗಳು, ಆಟಿಕೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು, ಬಹುಮಾನ, ಪ್ರಶಸ್ತಿಗಳನ್ನು ಸಹ ವಿತರಿಸುವ ಜೊತೆಗೆ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಸರ್ಕಾರವು ಜಾರಿಗೊಳಿಸಿದ ಅಥವಾ ಘೋಷಿಸಿದ ವಿವಿಧ ಯೋಜನೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಪ್ರಯತ್ನವನ್ನೂ ಮಕ್ಕಳ ದಿನದಂದು ನಡೆಯಬೇಕು ಎಂದರು. 

        ಕ್ರಿಯೇಟಿವ್ ಕಿಡ್ಸ್‌ ಹೋಮ್‌ನ ಮಕ್ಕಳು ವಿವಿಧ ವೇಷ ಭೂಷಣದೊಂದಿಗೆ, ವಿವಿಧ ವೃತ್ತಿಗಳ ವೇಷದೊಂದಿಗೆ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದ್ದಾರೆ. ಮಕ್ಕಳಿಗೆ ಸೂಕ್ತ ವೇದಿಕೆ ನೀಡಿದಲ್ಲಿ ಅವರು ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸುತ್ತಾರೆ ಎಂದು ಹೇಳಿದರು. 

ಶಾಲಾ ಮುಖ್ಯಗುರುಮಾತೆ ಡಾ.ಜ್ಯೋತಿ ಪೂಜಾರ ಮಾತನಾಡಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. 

       ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಲಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ಶಾಂತಾ ಮೋಸಲಗಿ, ಸುಕನ್ಯಾ ಹುಬ್ಬಳ್ಳಿ, ಪ್ರೀತಿ ಪಟ್ಟಣಶೆಟ್ಟಿ, ಲಕ್ಷ್ಮೀ ಬಡಿಗೇರ, ಸಿಬ್ಬಂದಿಗಳಾದ ಹೇಮಾ ಬಡಿಗೇರ, ರೆಹಮತ್ತಬಿ, ಆನಂದಯ್ಯ ಸ್ವಾಮಿ ಸೇರಿದಂತೆ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ